
ಶಿವಮೊಗ್ಗ ಲೈವ್.ಕಾಂ | SHIMOGA | 3 ಮೇ 2020
ಎರಡು ಲಕ್ಷ ರುಪಾಯಿ ಮೊತ್ತದ ಮೊಬೈಲ್ಗಳನ್ನು ಕಳ್ಳತನ ಮಾಡಿ, ಮಾರಾಟ ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ತಾಲೂಕು ತಿಪ್ಲಾಪುರ ಕ್ಯಾಂಪ್ನ ನಿವಾಸಿ ಅಬ್ದುಲ್ ಖಾದರ್ (30) ಬಂಧಿತ. ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಹಲವು ಬ್ರಾಂಡ್ಗಳ ಮೊಬೈಲ್ಗಳು ಈತನ ಬಳಿ ಪತ್ತೆಯಾಗಿದೆ. ಇವುಗಳ ಮೊತ್ತ 2.08 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ.
ಭದ್ರಾವತಿ ಡಿವೈಎಸ್ಪಿ ಸುಧಾಕರ್ ನಾಯಕ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಈ.ಓ.ಮಂಜುನಾಥ್ ನೇತೃತ್ವದಲ್ಲಿ ಪಿಎಸ್ಐ ದೇವರಾಜ್, ಸಿಬ್ಬಂದಿಗಳಾದ ನಾಗರಾಜ್.ಎಂ, ಆದರ್ಶ ಶೆಟ್ಟಿ, ಹನಮಂತ ಅಮಾತಿ ಅವರು ಕಳ್ಳನನ್ನುಬಂಧಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]