ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಸೆಪ್ಟೆಂಬರ್ 2021
ಗೃಹಿಣಿಯೊಬ್ಬರು ಮಗಳಿಗೆ ನೇಣು ಬಿಗಿದು, ತಾವೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಭೀತಿಯಿಂದಾಗಿ ಘಟನೆ ನಡೆದಿರುವ ಶಂಕೆ ಇದೆ.
ಸಂಗೀತಾ (35) ಮತ್ತು ಮಧುಶ್ರೀ (11) ಮೃತರು. ಭದ್ರಾವತಿ ಸುಭಾಷ್ ನಗರದಲ್ಲಿ ಘಟನೆ ಸಂಭವಿಸಿದೆ.
ಒಂದೇ ಸೀರೆಗೆ ಕೊರಳೊಡಿದರು
ತಾಯಿ, ಮಗಳು ಇಬ್ಬರು ಒಂದೇ ಸೀರೆಗೆ ಕೊರಳೊಡ್ಡಿದ್ದಾರೆ. ಸೀರೆಯ ಒಂದು ಬದಿಯಿಂದ ಕುಣಿಕೆ ಹೆಣೆದು ಮಧುಶ್ರೀಯನ್ನು ನೇಣಿಗೇರಿಸಿದ ಸಂಗೀತಾ, ಮತ್ತೊಂದು ತುದಿಗೆ ತಾನು ನೇಣು ಬಿಗಿದುಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣವಾಯ್ತಾ ಸಾಲ?
ಸಂಗೀತಾ ಮತ್ತು ಮಧುಶ್ರೀ ಸಾವಿಗೆ ಸಾಲದ ಭೀತಿಯೇ ಕಾರಣ ಎಂದು ಹೇಳಲಾಗುತ್ತಿದೆ. ಸಂಗೀತಾ ಪತಿ ಧನಶೇಖರ್ ಅವರು ಹೋಲ್ ಸೇಲ್ ವ್ಯಾಪಾರ ನೆಡಸುತ್ತಿದ್ದರು. ಲಾಕ್ ಡೌನ್ ಹಿನ್ನೆಲೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಇದರಿಂದ ಸಂಗೀತ ಮಾನಸಿಕವಾಗಿ ಕುಗ್ಗಿದ್ದರು. ಅಲ್ಲದೆ ಪತಿ ಮಾಡಿದ್ದ ಸಾಲ ತೀರಿಸಲು ಆಗುತ್ತದೆಯೋ ಇಲ್ಲವೋ ಎಂದು ಚಿಂತೆಗೀಡಾಗಿದ್ದರು.
ಭದ್ರಾವತಿಯ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200