SHIVAMOGGA LIVE NEWS, 13 DECEMBER 2024
ಭದ್ರಾವತಿ : ತಾಲೂಕಿನ ಕಾಟಿಕೆರೆ ಗ್ರಾಮದ ಸಕ್ರೆಬೈಲು ಸಮೀಪ ಭದ್ರಾ ನದಿಯಲ್ಲಿ ಹಾಗೂ ಮಂಗೋಟೆ ಗ್ರಾಮದ ಸಮೀಪ ತುಂಗಾ-ಭದ್ರಾ ನದಿಯಲ್ಲಿ ಅಕ್ರಮವಾಗಿ ಕಳವು ಮಾಡಿ ಸಂಗ್ರಹಿಸಿ ಇಡಲಾಗಿದ್ದ 20 ಮೆಟ್ರಿಕ್ ಟನ್ ಮರಳನ್ನು (Sand) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಸಿಪಿಐ ಲಕ್ಷ್ಮೀಪತಿ ನೇತೃತ್ವದ ತಂಡ ದಾಳಿ ನಡೆಸಿ, ಕಾಟಿಕೆರೆ ಗ್ರಾಮದ ಸಕ್ರೆಬೈಲು ಸಮೀಪ ಭದ್ರಾ ನದಿ ದಡದಲ್ಲಿ 10 ಮೆಟ್ರಿಕ್ ಟನ್ ಮತ್ತು ಮಂಗೋಟೆ ಗ್ರಾಮದ ಸಮೀಪ ಹಾದು ಹೋಗಿರುವ ತುಂಗಾ-ಭದ್ರಾ ನದಿ ದಡದಲ್ಲಿ 10 ಮೆಟ್ರಿಕ್ ಟನ್ ಮರಳು ದಾಸ್ತಾನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸೂಪರ್ ಮಾರ್ಕೆಟ್ಗಳ ಟ್ರೆಂಡ್ ಜೋರು, ನಿತ್ಯ ಸಾವಿರ ಸಾವಿರ ಗ್ರಾಹಕರು, ಕಾರಣವೇನು?