ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿರಾಳಕೊಪ್ಪ: ಮಂಚಿಕೊಪ್ಪದ ಹಕ್ಕಳ್ಳಿ ಎಂಬಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ 47 ಜಾನುವಾರುಗಳನ್ನು ಶಿರಾಳಕೊಪ್ಪ ಪೊಲೀಸರು ರಕ್ಷಿಸಿ (Secure) ಗೋ ಶಾಲೆಗೆ ಬಿಟ್ಟಿದ್ದಾರೆ.
ಹಕ್ಕಳ್ಳಿ ಗ್ರಾಮದ ಮೌಲಾನಾ ಸಾಜಿದ್ ಅಲಿ ಎಂಬುವವರ ಮಾವಿನ ತೋಟದಲ್ಲಿ ವಧೆಗಾಗಿ ಕಟ್ಟಿದ್ದ ಎರಡು ಎಮ್ಮೆಗಳು ಸೇರಿದಂತೆ 47ಕ್ಕೂ ಹೆಚ್ಚು ಜಾನುವಾರುಗಳನ್ನು ಪಿಎಸ್‌ಐ ಪ್ರಶಾಂತ್ ಕುಮಾರ್ ಹಾಗೂ ಸಿಬ್ಬಂದಿ ರಕ್ಷಿಸಿದ್ದಾರೆ. 250 ಕೆ.ಜಿ. ಮಾಂಸ, 4 ವಾಹನಗಳು, ಆಯುಧ ಹಾಗೂ ತಕ್ಕಡಿಯನ್ನು ವಶಕ್ಕೆ ಪಡೆದಿದ್ದಾರೆ.

ಜೈನುಲ್ಲ, ಅಕ್ಬರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಕಾರ್ತಿಕ್, ಬಂಗಾರಪ್ಪ, ಶಿವಶಂಕರ್ ಬಾರ್ಕಿ, ಪ್ರದೀಪ್, ಶಿವಮೂರ್ತಿ ಇನ್ನಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು..

ಬೈಕ್‌ನಲ್ಲಿ ಸಾಗಿಸುತ್ತಿದ್ದ ಗೋಮಾಂಸ ವಶಕ್ಕೆ
ಹೊಳೆಹೊನ್ನೂರು: ಕೂಡ್ಲಿ ಗ್ರಾಮದಿಂದ ಹೊಳೆಹೊನ್ನೂರಿಗೆ ಬೈಕ್ ನಲ್ಲಿ ಸಾಗಿಸುತ್ತಿದ್ದ ಗೋ ಮಾಂಸ ಪತ್ತೆ ಮಾಡಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶೋಹಿಬ್, ಅಲ್ತಾಫ್ ಹಾಗೂ ಸೈಫ್ ಅಲಿ ಖಾನ್ ಬಂಧಿತರು. ಬೈಕ್‌ನಲ್ಲಿ ಗೋಮಾಂಸ ಸಾಗಿಸುತ್ತಿರುವ ದಾಳಿ ನಡೆಸಿದಾಗ ಮನೆಯೊಂದರಿಂದ ಗೋಮಾಂಸ ತಂದಿದ್ದಾಗಿ ಗೊತ್ತಾಗಿತ್ತು. ಸೈಫ್ ಅಲಿ ಖಾನ್ ಮನೆ ಮೇಲೆ ದಾಳಿ 30 ಕೆಜಿ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ. ಮಾದರಿಯನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದೆ.
ಇದನ್ನೂ ಓದಿ » ಸರ್ಕಾರಿ ವಾಹನ ಸ್ವಂತಕ್ಕೆ ಬಳಕೆ ಆರೋಪ, ಶಿವಮೊಗ್ಗ ವಿಭಾಗದ ಜಂಟಿ ಆಯುಕ್ತರಿಂದ ನೊಟೀಸ್

LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





