
ಶಿವಮೊಗ್ಗ ಲೈವ್.ಕಾಂ | BHADRAVATHI | 1 ಮೇ 2020
ಭದ್ರಾವತಿ ತಾಲೂಕಿನ ವಿವಿಧೆಡೆ ಮೇ 2ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಭದ್ರಾವತಿ ಸಿಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕರೆಂಟ್ ಇರಲ್ಲ ಅಂತಾ ಮೆಸ್ಕಾಂ ಭದ್ರಾವತಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
MRS ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಬದಲಿಸಿ ಕಡೂರು – ಶಿವಮೊಗ್ಗ 110 ಕೆವಿ ಮಾರ್ಗಕ್ಕೆ ಬದಲಿಸುವ ಹಿನ್ನೆಲೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯೆಯ ಸಾದ್ಯತೆ ಇದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ
ಭದ್ರಾವತಿ ನಗರ, ಅಂತರಗಂಗೆ, ಉಬ್ರಾಣಿ, ಹಿರಿಯೂರು, ಕಾರೇಹಳ್ಳಿ, ದಡಮಘಟ್ಟ, ಬಾರಂದೂರು, ತಡಸ, ಬಿಳಿಕಿ, ಬೊಮ್ಮೆನಹಳ್ಳಿ, ದೊಡ್ಡೇರಿ ಮತ್ತು ಭದ್ರಾವತಿಯ ವಿವಿಧೆಡೆ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]