SHIVAMOGGA LIVE NEWS | 10 JANUARY 2024
SHIMOGA : ರೈತರ ಒತ್ತಾಯದ ಹಿನ್ನೆಲೆ ಬೇಸಿಗೆ ಹಂಗಾಮಿಗೆ ಭದ್ರಾ ಜಲಾಶಯದ ಬಲದಂಡೆ ನಾಲೆಗೆ ಜ.20ರ ಬದಲು ಜ.15ರಿಂದಲೇ ನೀರು ಹರಿಸಲು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಧಿಕಾರ ತೀರ್ಮಾನಿಸಿದೆ. ಇನ್ನೊಂದೆಡೆ ಎಡದಂಡೆ ನಾಲೆಗೆ ಇಂದಿನಿಂದ ನೀರು ಹರಿಸಲಾಗುತ್ತಿದೆ. ನಾಲೆಗಳಿಗೆ ನೀರು ಹರಿಸುವ ಕುರಿತು ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದೆ.
ಎಡದಂಡೆ ನಾಲೆಯ ವೇಳೆಪಟ್ಟಿ
ಜ.10 ರಿಂದ 25ರವರಗೆ (16 ದಿನ) ನೀರು ಹರಿಸಲಾಗುತ್ತದೆ. ಜ.26 ರಿಂದ ಫೆ.9ರವರೆಗೆ (15 ದಿನ) ನೀರು ನಿಲುಗಡೆ. ಫೆ.10 ರಿಂದ ಫೆ.26 ರವರೆಗೆ ಆನ್ (17 ದಿನ), ಫೆ.27 ರಿಂದ ಮಾ.12ರವರೆಗೆ (15 ದಿನ) ಆಫ್, ಮಾ.13 ರಿಂದ ಮಾ.30ರವರೆಗೆ (18 ದಿನ) ಆನ್, ಮಾ.31 ರಿಂದ ಏ.14ರವರೆಗೆ (15 ದಿನ), ಏ.15 ರಿಂದ ಮೇ 3ರವರೆಗೆ (19 ದಿನ) ಆನ್. ಒಟ್ಟು 70 ದಿನ ನಾಲೆಗೆ ನೀರು ಹರಿಸಲಾಗುತ್ತದೆ.
ಬಲದಂಡೆ ನಾಲೆ ವೇಳಾಪಟ್ಟಿ
ಜ.15 ರಿಂದ ಜ.26ರವರೆಗೆ (12 ದಿನ) ನೀರು ಹರಿಸಲಾಗುತ್ತದೆ. ಜ.27 ರಿಂದ ಫೆ.15ರವರೆಗೆ (20 ದಿನ) ನೀರು ನಿಲುಗಡೆ. ಫೆ.16 ರಿಂದ ಫೆ.28 (13 ದಿನ) ಆನ್, ಫೆ.29 ರಿಂದ ಮಾ.19ರವರೆಗೆ (20 ದಿನ) ಆಫ್, ಮಾ.20 ರಿಂದ ಏ.2ರವರೆಗೆ (14 ದಿನ) ಆನ್, ಏ.3 ರಿಂದ ಏ.22ರವರೆಗೆ (20 ದಿನ) ಆಫ್, ಏ.23 ರಿಂದ ಮೇ 6ರವರೆಗೆ (14 ದಿನ) ಆನ್. ಒಟ್ಟು 53 ದಿನ ನಾಲೆಗೆ ನೀರು ಹರಿಸಲಾಗುತ್ತದೆ.
ರೈತರಿಗೆ 3 ಪ್ರಮುಖ ಸೂಚನೆ
ಇತ್ತ ನೀರು ಹರಿಸುವ ವೇಳಾಪಟ್ಟಿ ಪ್ರಕಟ ಬೆನ್ನಿಗೆ ನೀರಾವರಿ ನಿಗಮ ರೈತರಿಗೆ ಮೂರು ಪ್ರಮುಖ ಸೂಚನೆ ನೀಡಿದೆ.
ಸೂಚನೆ 1 : ಜಲಾಶಯದ ನೀರಿನ ಸಂಗ್ರಹಣೆ, ಒಳ ಹರಿವು ಆಧರಿಸಿ ನಾಲೆಗಳಿಗೆ ನೀರನ್ನು ಹರಿಸಲಾಗುತ್ತದೆ. ಬೆಳೆದು ನಿಂತ ಬೆಳೆ, ಜನ – ಜಾನುವಾರುಗಳ ಉಪಯೋಗಕ್ಕೆ ಮಾತ್ರ ನೀರು ಹರಿಸಲಾಗುತ್ತಿದೆ. ಬೆಳೆ ನಾಶ, ನಷ್ಟವಾದಲ್ಲಿ ನೀರಾವರಿ ನಿಗಮ ಜವಾಬ್ದಾರಿ ಹೊರುವುದಿಲ್ಲ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಸಿಎಂ ಸಿದ್ದರಾಮಯ್ಯ, ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಹೆಚ್ಚು ಜನ ಭಾಗಿ
ಸೂಚನೆ 2 : ನಾಲೆಗಳಲ್ಲಿ ಹರಿಬಿಡುವ ನೀರಿನಲ್ಲಿ ಕುಡಿಯುವ ನೀರಿನ ಅವಲಂಬಿತ ಪಟ್ಟಣಗಳ ಬೇಡಿಕೆಯೂ ಸೇರಿದೆ.
ಸೂಚನೆ 3 : ಬಲ ಮತ್ತು ಎಡದಂಡೆ ನಾಲೆಗಳಿಗೆ ಒಟ್ಟು 47 ದಿನ ಹರಿಸುವಷ್ಟು ನೀರು ಲಭ್ಯವಿದೆ. 2 ಟಿಎಂಸಿ ಒಳ ಹರಿವು ನಿರೀಕ್ಷೆಯೊಂದಿಗೆ ಆನ್ ಮತ್ತು ಆಫ್ ಪದ್ಧತಿಯಂತೆ ನೀರು ಹರಿಸಲಾಗುತ್ತದೆ. ನಿರೀಕ್ಷಿತ ಒಳ ಹರಿವು ಬಾರದೆ ಇದ್ದಲ್ಲಿ ಕುಡಿಯುವ ನೀರು ಹೊರತು ನೀರಾವರಿಗೆ ಲಭ್ಯವಿರುವ ನೀರನ್ನು ಬರುವಷ್ಟು ದಿನಗಳಿಗೆ ಮಾತ್ರ ಹರಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200