ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
BHADRAVATHI : ನೌಕರನ ವೇತನ ಸಂಬಂಧ ಮಾಹಿತಿ ನೀಡದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಆಯೋಗ 25 ಸಾವಿರ ರೂ. ದಂಡ (Fine) ವಿಧಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮೈಸೂರು ಕಾಗದ ಕಾರ್ಖಾನೆಯ (ಎಂಪಿಎಂ) ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಮುಖ್ಯ ಆಡಳಿತಾಧಿಕಾರಿ ಜಿ.ಎಸ್ ಶ್ರೀನಿವಾಸ್ ಅವರಿಗೆ ದಂಡ (Fine) ವಿಧಿಸಲಾಗಿದೆ.
ಇದನ್ನೂ ಓದಿ- WhatsAppನಲ್ಲಿ Instagram ರೀತಿಯ ಫೀಚರ್, ಇನ್ಮುಂದೆ ನಿಮ್ಮದೆ ಚಾನಲ್ ಮಾಡಬಹುದು
ಏನಿದು ಪ್ರಕರಣ?
ನಿವೃತ್ತ ನೌಕರ ಟಿ.ಜಿ.ಬಸವರಾಜಯ್ಯ ಅವರು 2016ರ ಜನವರಿಯಿಂದ 2021ರ ಮೇ ತಿಂಗಳವರೆಗೆ ನೀಡಿರುವ ವೇತನದ ಮಾಹಿತಿ ಕೇಳಿದ್ದರು. ಪ್ರತಿ ತಿಂಗಳ ವಿವರದ ದೃಢೀಕೃತ ಪ್ರತಿ ನೀಡಬೇಕು ಎಂದು ಕಾರ್ಖಾನೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಶ್ರೀನಿವಾಸ್ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಶ್ರೀನಿವಾಸ್ ಅವರು ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸಲು ವಿಫಲರಾಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಆಯೋಗ, ಮಾಹಿತಿ ಹಕ್ಕು ಅಧಿನಿಯಮದ ವಿವಿಧ ಕಲಂಗಳ ಅನ್ವಯ ದಂಡ ವಿಧಿಸಿದೆ. ಈ ಕುರಿತು ರಾಜ್ಯ ಮಾಹಿತಿ ಆಯುಕ್ತ ಹೆಚ್.ಸಿ ಸತ್ಯನ್ ಅವರು ಮೇಲ್ಮನವಿದಾರ ಟಿ.ಜಿ ಬಸವರಾಜಯ್ಯ ಅವರಿಗೆ ಈ ಮಾಹಿತಿ ನೀಡಿದ್ದಾರೆ.