ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 FEBRUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SESSION NEWS : ನೀಲಗಿರಿ ಬೆಳೆಯಲು ವಿನಾಯಿತಿ ಮತ್ತು ಹೊಣೆಗಾರಿಕೆಗಳಿಲ್ಲದ ಕಂಪನಿ ಕಾರ್ಯಾಚರಣೆಗೆ ಬಿಡ್ದಾರರು ಬಯಸಿದ್ದಾರೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಸದನಲ್ಲಿ ತಿಳಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವಿಧಾನ ಪರಿಷತ್ತಿನಲ್ಲಿ ಎಸ್.ರುದ್ರೇಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
ಎಂಪಿಎಂ ಕುರಿತು ಸರ್ಕಾರ ಹೇಳಿದ್ದೇನು?
ಕಳೆದ ಅಧಿವೇಶದಲ್ಲಿ ಸರ್ಕಾರ ಎಂಪಿಎಂ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಈ ಕುರಿತು ಈವರೆಗು ಯಾವುದೆ ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಾರಣವೇನು. ಇನ್ನು, ಎಂಪಿಎಂ ಕಾರ್ಖಾನೆಯನ್ನು ಯಾವಾಗ ಪುನಾರಂಭ ಮಾಡಲಾಗುತ್ತದೆ ಎಂದು ಎಂಎಲ್ಸಿ ರುದ್ರೇಗೌಡ ಅವರು ಸರ್ಕಾರವನ್ನು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿರುವ ಸಚಿವ ಎಂ.ಬಿ.ಪಾಟೀಲ್, 2020ರ ನವೆಂಬರ್ನಲ್ಲಿ ಕರೆದ ಟೆಂಡರ್ನಲ್ಲಿ ಯಾವುದೆ ಬಿಡ್ ಸ್ವೀಕಾರವಾಗಿಲ್ಲ. ಆದರೆ ನಿರೀಕ್ಷಿತ ಬಿಡ್ದಾರರು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಬೇಕು. ಯಾವುದೆ ಹೊಣೆಗಾರಿಕೆ ಇಲ್ಲದೆ ಕಂಪನಿ ಕಾರ್ಯಾಚರಣೆ ನಡೆಸಲು ಅವಕಾಶ ಬೇಕು ಎಂದು ಕೇಳಿದ್ದಾರೆ. ನೀಲಗಿರಿ ಬೆಳೆಗೆ ವಿನಾಯಿತಿ, 1102 ಕೋಟಿ ರೂ. ಹೊಣೆಗಾರಿಕೆ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ – ಉದ್ಯಮಿ ರುದ್ರೇಗೌಡರ ಯಶಸ್ಸಿನ ಸೀಕ್ರೆಟ್ ತಿಳಿಸಿದ ಮಾಜಿ ಸಿಎಂ ಯಡಿಯೂರಪ್ಪ, ಏನದು?
2023ರ ನ.17ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಎಂಪಿಎಂಗೆ ನೀಲಗಿರಿ ಬೆಳೆಯಲು ವಿನಾಯಿತಿ ಕುರಿತು ಅರಣ್ಯ ಇಲಾಖೆ ತಜ್ಞರ ಸಮಿತಿಯು ಪರಿಶೀಲಿಸಿ ವರದಿ ನೀಡಬೇಕಿದೆ. ಬಾಕಿ ಇರುವ ವಿದ್ಯುತ್ ಶುಲ್ಕ ಮತ್ತು ಅದರ ಬಡ್ಡಿ ಮನ್ನಾಗೆ ಇಂಧನ ಇಲಾಖೆಗೆ ಕೋರಲಾಗಿದೆ. ಕಂಪನಿಯ ಸಾಲ ಮತ್ತು ಬಾಕಿಗಳ ಕುರಿತು ಆರ್ಥಿಕ ಇಲಾಖೆ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ. ನಿರೀಕ್ಷಿತ ಬಿಡ್ದಾರರು ಬಯಸಿದಂತೆ ಕ್ರಮ ಕೈಗೊಂಡ ಬಳಿಕ ಕಾರ್ಖಾನೆ ಪುನಾರಂಭ ಮಾಡಲಾಗುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.
ಇದನ್ನೂ ಓದಿ – ‘ಸಕ್ಕರೆ ಕಾರ್ಖಾನೆ ಜಾಗ ರೈತರಿಗೆ ಉಳಿಸಿಕೊಡಲು ಇದೊಂದು ತಿದ್ದುಪಡಿ ತರಲಿʼ, ಮಾಜಿ MLA ಸಲಹೆ, ಏನದು?