ಭದ್ರಾ ನಾಲೆ ದಂಡೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ, ಕರಕುಚ್ಚಿಯ ಇಬ್ಬರು ಅರೆಸ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 SEPTEMBER 2023

BHADRAVATHI : ಭದ್ರಾ ನಾಲೆಯ ದಂಡೆಯ ಮೇಲೆ ಅಕ್ರಮಮವಾಗಿ ಶ್ರೀಗಂಧ (Sandalwood) ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಕರಕುಚ್ಚಿ ಗ್ರಾಮದ ರಾಮು ಹಾಗೂ ಇಲಿಯಾಸ್ ಬಂಧಿತರು. 12.1 ಕೆ.ಜಿ. ಶ್ರೀಗಂಧದ (Sandalwood) ಚಕ್ಕೆ ಹಾಗೂ ಬೈಕ್‌ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ – ಗೆಜ್ಜೇನಹಳ್ಳಿ ಬಳಿ ಅರಣ್ಯ ಇಲಾಖೆ ಬೋನಿಗೆ ಬಿತ್ತು ಚಿರತೆ

ಭದ್ರಾವತಿಯ ಡಿಸಿಎಫ್ ಆಶಿಶ್ ರೆಡ್ಡಿ ಹಾಗೂ ಎಸಿಎಫ್‌ ದಿನೇಶ್ ಎಸ್.ಒ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದು, ಲಕ್ಕವಳ್ಳಿ ವಲಯದ ವಲಯ ಅರಣ್ಯಾಧಿಕಾರಿ ವಾಗೀಶ್ ಬಿ.ಜೆ. ಉಪವಲಯ ಅರಣ್ಯ ಅಧಿಕಾರಿಗಳಾದ ಮನೋಜ್ ಕೆ.ಎಸ್‌., ಜಗದೀಶ್ ಬಿ, ಶಂಕರನಾರಾಯಣ ಎ, ಯೋಗಾನಂದ ಕೆ.ಸಿ., ಮಾರುತಿ ಬಾಬು, ಅರಣ್ಯಾಧಿಕಾರಿಗಳಾದ ಮಂಜುನಾಥ ಮೊಗೇರ, ಸುಬ್ರಹ್ಮಣ್ಯ, ಸಚಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಇವತ್ತಿನ TOP 15 NEWS | ಓದಲು ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 8, 2023

Leave a Comment