SHIVAMOGGA LIVE NEWS | 23 FEBRURARY 2023
BHADRAVATHI : ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆದು, ಪುನಶ್ಚೇತನ ಮಾಡಬೇಕು ಎಂದು ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳ ಮೆರವಣಿಗೆ (students procession) ನಡೆಸಿದರು. ವಿಐಎಸ್ಎಲ್ ಕಾರ್ಖಾನೆ ಮುಂಭಾಗದಿಂದ ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿದರು.
ಭದ್ರಾವತಿಯ ವಿವಿಧ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಹೇಗಿತ್ತು ಮೆರವಣಿಗೆ?
ಸಾವಿರಾರು ವಿದ್ಯಾರ್ಥಿಗಳು ಶಾಲೆಯ ಸಮವಸ್ತ್ರದಲ್ಲಿಯೇ ಆಗಮಿಸಿದ್ದರು. ಕೆಲವು ಶಾಲೆಗಳು ಬ್ಯಾಂಡ್ ಟ್ರೂಪ್ ಮೆರವಣಿಗೆಯಲ್ಲಿ (students procession) ಭಾಗವಹಿಸಿದ್ದವು. ವಿಐಎಸ್ಎಲ್ ಉಳಿಸುವಂತೆ ಫ್ಲೇಕರ್ ಹಿಡಿದು, ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡಿದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಕಾರ್ಮಿಕರಿಂದ ವಿಐಎಸ್ಎಲ್ ಕಾರ್ಖಾನೆ ಅಪ್ಪಿಕೋ ಚಳವಳಿ
ವಿಐಎಸ್ಎಲ್ ಕಾರ್ಖಾನೆ ಗೇಟ್ ಬಳಿಯಿಂದ ಮೆರವಣಿಗೆ ಆರಂಭಿಸಲಾಯಿತು. ರೈಲ್ವೆ ಸೇತುವೆ, ಬಿ.ಹೆಚ್.ರಸ್ತೆ, ಹಾಲಪ್ಪ ವೃತ್ತ, ಮಾಧವಾಚಾರ್ ಸರ್ಕಲ್, ಡಾ. ರಾಜ್ ಕುಮಾರ್ ರಸ್ತೆ, ರಂಗಪ್ಪ ಸರ್ಕಲ್ ಮೂಲಕ ಕೋರ್ಟ್ ಸರ್ಕಲ್ ನಲ್ಲಿರುವ ತಾಲೂಕು ಆಡಳಿತ ಸೌಧ ಆವರಣದವರೆಗೆ ಮೆರವಣಿಗೆ ನಡೆಯಿತು.
ಇದನ್ನೂ ಓದಿ – ಮೇಕ್ ಇನ್ ಇಂಡಿಯಾ ಪ್ರತಿಪಾದಕರು ವಿಐಎಸ್ಎಲ್ ಕಾರ್ಖಾನೆಗೆ ನೆರವು ನೀಡಲಿ
ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಮಹಾಪೋಷಕರಾದ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಡಿ.ಪ್ರಭಾಕರ್ ಬೀರಯ್ಯ, ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಡಾ. ವಿನೀತ್ ಆನಂದ್ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಉಪ ತಹಶೀಲ್ದಾರ್ ರಂಗಮ್ಮ ಅವರು ಮನವಿ ಸ್ವೀಕರಿಸಿದರು. ವಿವಿಧ ಶಾಲೆಗಳ ಮಕ್ಕಳು, ಸಿಬ್ಬಂದಿ, ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.