ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 31 JULY 2023
BHADRAVATHI : ಅರಿಶಿನಗುಂಡಿ ಜಲಪಾತದಲ್ಲಿ (Arasinagundi Falls) ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಶರತ್ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನೆರವೇರಿತು. ತಮಿಳು ಗೌಂಡರ್ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ತಡರಾತ್ರಿ ಮೃತದೇಹ ಮನೆಗೆ
ಜು.23ರಂದು ಅರಿಶಿನಗುಂಡಿ ಜಲಪಾತದಲ್ಲಿ (Arasinagundi Falls) ಶರತ್ ಕಾಲು ಜಾರಿ ಬಿದ್ದಿದ್ದ. ಇದರ ವಿಡಿಯೋ ವೈರಲ್ ಆಗಿತ್ತು. ಶರತ್ಗಾಗಿ ತೀವ್ರ ಹುಡುಕಾಟ ನಡೆದಿತ್ತು. ಜು.30ರಂದು ಶರತ್ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಭದ್ರಾವತಿಯ ಕೆ.ಹೆಚ್.ನಗರಕ್ಕೆ ರವಾನಿಸಲಾಗಿತ್ತು. ತಡರಾತ್ರಿ ಶರತ್ ಮೃತದೇಹ ಆಗಮಿಸುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಜಲಪಾತದ ಬಳಿ ಶರತ್ ಮೃತದೇಹ ಪತ್ತೆ, ಮನೆಗೆ ಬಂದ ಸಂಸದ ರಾಘವೇಂದ್ರಗೆ ಕುಟುಂಬದಿಂದ ‘ಒಂದು ಮನವಿʼ
ಅಂತ್ಯ ಸಂಸ್ಕಾರಕ್ಕು ಮೊದಲು ಮದುವೆ ಶಾಸ್ತ್ರ
ಕೆ.ಹೆಚ್.ನಗರದಲ್ಲಿ ಶರತ್ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಶರತ್ ಅವಿವಾಹಿತನಾಗಿದ್ದ ಕಾರಣ, ತಮಿಳು ಗೌಂಡರ್ ಪದ್ಧತಿಯಂತೆ ಅಂತ್ಯ ಸಂಸ್ಕಾರಕ್ಕು ಮೊದಲು ವಿವಾಹ ಶಾಸ್ತ್ರ ನೆರವೇರಿಸಲಾಯಿತು. ಶರತ್ ಮೃತದೇಹದ ಪಕ್ಕದಲ್ಲಿ ಬಾಳೆ ಗಿಡ ಇಟ್ಟು ತಾಳಿ ಕಟ್ಟಲಾಯಿತು. ಬಳಿಕ ಬಾಳೆ ಗಿಡವನ್ನು ಕತ್ತರಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಶರತ್ ಕುಟುಂಬದವರು, ಊರಿನವರು, ಸ್ನೇಹಿತರು ಸೇರಿದಂತೆ ದೊಡ್ಡ ಸಂಖ್ಯೆ ಜನ ಸೇರಿದ್ದರು.
ಜಾರಿ ಬೀಳುವ ಮುನ್ನ ವಿಡಿಯೋ
ಜಾರಿ ಬೀಳುವ ಮುನ್ನ ಶರತ್ ಅರಿಶಿನಗುಂಡಿ ಜಲಪಾತದಲ್ಲಿ ನಿಂತು ಸೆಲ್ಫಿ ವಿಡಿಯೋ ಚಿತ್ರೀಕರಿಸಿದ್ದ. ಘಟನೆಗು ಕೆಲವೇ ಕ್ಷಣ ಮುನ್ನ ಈ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶರತ್ ಕುರಿತು ಆತನ ಸ್ನೇಹಿತರು ಮರುಗಿದ್ದಾರೆ.