ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಅನ್ಯಾಯ, ಅನಾಚಾರ ಮಾಡಿದರೆ ದೇವರು ಒಂದಲ್ಲಾ ಒಂದು ದಿನ ಸರ್ಜಿಕಲ್ ಸ್ಟ್ರೈಕ್ (Surgical Strike) ಮಾಡಿಯೇ ಮಾಡುತ್ತಾನೆ. ಈ ಬಗ್ಗೆ ಸದಾ ಎಚ್ಚರ ಇಟ್ಟುಕೊಳ್ಳಿ ಎಂದು ಉತ್ತರಾದಿ ಮಠಾಧೀರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು.
ಭ್ರಷ್ಟಾಚಾರ, ಕಳ್ಳತನ ಮಾಡಿದರೆ ಅನಂತ ದುಃಖವನ್ನು ಅನುಭವಿಸುತ್ತಾರೆ. ಆದರೂ ಅವರಿಗೆ ಅನ್ಯಾಯದ ಅರ್ಥ ಆಗುವುದಿಲ್ಲ. ಅನ್ಯಾಯದ ಹಣವನ್ನು ದಕ್ಕಿಸಿಕೊಳ್ಳಲು ಸಾಧ್ಯವೇ ಇಲ್ಲ. ದೇವರು ಮಾಡಿದ ನಿಯಮಕ್ಕೆ ವಿರುದ್ಧವಾಗಿ ಮನುಷ್ಯ ನಡೆದರೆ ದೇವರು ಸುಮ್ಮನೆ ಕೂರುವುದಿಲ್ಲ. ದೇವರಿಗೆ ಹೇಡಿತನ ಇಲ್ಲ. ಹೀಗಾಗಿ ನಿಶ್ಚಿತವಾಗಿ ಅನಾಚಾರಿಗಳಿಗೆ ಶಿಕ್ಷೆ ಆಗಿಯೇ ಆಗುತ್ತದೆ. ಮೊದಲು ಅಧರ್ಮದಿಂದ ವೃದ್ಧಿಯಾಗಲು ಬಿಡುತ್ತಾನೆ. ತಿದ್ದಿಕೊಳ್ಳುತ್ತಾನಾ ನೋಡುತ್ತಾನೆ. ಬದಲಾಗದಿದ್ದರೆ ಕೊನೆಗೆ ಒಂದು ದಿನ ತಕ್ಕಶಾಸ್ತಿ ಮಾಡುತ್ತಾನೆ. ದೇವರ ನಿಗ್ರಹಕ್ಕೆ ಗುರಿಯಾಗುವ ಯಾವ ಅಧರ್ಮ ಮಾಡಬೇಡಿ ಎಂದು ಶ್ರೀಗಳು ಎಚ್ಚರಿಸಿದರು.
ಯುವತಿಯರು ದುರ್ಗೆಯನ್ನು ಸ್ಮರಿಸಿ
ಎಲ್ಲ ಸಜ್ಜನರೂ, ಅದರಲ್ಲೂ ಸ್ತ್ರೀಯರು, ವಿಶೇಷವಾಗಿ ಯುವತಿಯರು ಉತ್ತಮವಾದ ಬ್ರಹ್ಮಚರ್ಯದಿಂದ ಜೀವನ ನಡೆಸಬೇಕು. ಶುದ್ಧವಾದ ಚಾರಿತ್ರ‍್ಯ ಸಂಪನ್ನರಾಗಿ ಬಾಳಿ ಬೆಳಗಬೇಕು. ಅದಕ್ಕಾಗಿ ದುರ್ಗೆಯ ಸ್ಮರಣೆ ಮಾಡಬೇಕು. ದುರ್ಗಾ ಸುಳಾದಿಯನ್ನು ನಿತ್ಯ ಹೇಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಇದನ್ನು ಓದಿ – ಶಿವಮೊಗ್ಗದಲ್ಲಿ ಜನತಾ ದರ್ಶನಕ್ಕೆ ದಿನಾಂಕ, ಸ್ಥಳ ನಿಗದಿ, ಸಮಸ್ಯೆ ಹೇಳಿಕೊಳ್ಳಲು ಜನರಿಗಿದೆ ಮುಕ್ತ ಅವಕಾಶ
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.