ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಹೊಳೆಹೊನ್ನೂರು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 11 ಜನರು ನಾಯಿ ಕಡಿತಕ್ಕೆ (dog bite) ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ – ತೀರ್ಥಹಳ್ಳಿ ವ್ಯಕ್ತಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಕಾರಣವೇನು?
ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ನೀಡಿರುವ ಮಾಹಿತಿಯಂತೆ, ಒಟ್ಟು 11 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ದಾಳಿ ಮಾಡಿದ ನಾಯಿಯು ಹುಚ್ಚು ನಾಯಿ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಎಲ್ಲರಿಗೂ ತಕ್ಷಣವೇ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ಲಸಿಕೆ ನೀಡಲಾಗಿದೆ.

ಹೊಳೆಹೊನ್ನೂರಿನ ಹೇಮಾವತಿ, ನಟರಾಜ, ಕವಿತಾ, ನೀಲಮ್ಮ , ಜಬ್ಬಾರ್ ಖಾನ್, ಮದಿಹಾ, ಅರಹತೊಳಲು ಗ್ರಾಮದ ಕೆ. ರಾಜಪ್ಪ, ತರೀಕೆರೆಯ ಗಿರೀಶ್ ಎಂಬುವವರಿಗೆ ನಾಯಿ ಕಚ್ಚಿದೆ ಎಂದು ತಿಳಿದು ಬಂದಿದೆ. ಇನ್ನು, ನಾಯಿ ಕಡಿತ ಸಂಬಂಧ ವೈದ್ಯಾಧಿಕಾರಿಗಳು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ.

LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು















