ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020
ಭದ್ರಾವತಿಯಲ್ಲಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಸರ್ವಧರ್ಮದ ಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಅಪ್ಪಾಜಿಗೌಡ ಅವರ ಕುರಿತು ಮಾತನಾಡಿದರು.
ಶ್ರೀ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ : ಆರೋಗ್ಯ ನೋಡಿಕೊಳ್ಳಿ ಎಂದು ಹೇಳುತ್ತಿದ್ದೆ. ಜನ ಸೇವೆಯಲ್ಲಿರುವವರು ಆರೋಗ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿರಲು ಆಗುವುದಿಲ್ಲ. ನಾಲ್ಕು ಜನಕ್ಕೆ ಒಳ್ಳೆಯದಾದರೆ ಸಾಕು ಎಂದು ಹೇಳುತ್ತಿದ್ದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೆ ಬದುಕಿದ್ದಾರೆ ಅಂತಾ ಹಲವು ಬಾರಿ ನಮ್ಮ ಬಳಿ ಹೇಳಿದ್ದಾರೆ. ಮೂರು ಬಾರಿ ಶಾಸಕರಾಗಿದ್ದರು. ಆದರೆ ಯಾವುದೇ ಸ್ಥಾನಮಾನ ಪಡೆಯಲಿಲ್ಲ. ಸ್ಥಾನಮಾನದ ವಿಚಾರದಲ್ಲಿ ಮಾತಾಡಿದರೆ ಸ್ಥಾನ ಬೇಕಿಲ್ಲ. ಜನರ ಮಧ್ಯೆ ಇದ್ದರೆ ಸಾಕು ಅನ್ನುತ್ತಿದ್ದರು.
ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಬಸವ ಕೇಂದ್ರ, ಶಿವಮೊಗ್ಗ :ಮನುವಷ್ಯ ಹೇಗೆ ಬದುಕಬೇಕು ಅಂದರೆ, ಮಂದಿ ಮಕ್ಕಳ ಜೊತೆಗೆ ಚನ್ನಾಗಿ ಇರಬೇಕು. ನಂದಿಯ ಮೇಲೆ ಶಿವ ಬಂದು ಕರೆದಾಗ ಮಂದಿ ಬಾಯಲ್ಲಿ ಇರಬೇಕು ಅಂತಾ ನಮ್ಮ ಜಾನಪದವರು ಹೇಳ್ತಾರೆ. ಕರೋನದಂತಹ ಕಾಲದಲ್ಲೂ ಅಪ್ಪಾಜಿಗೌಡರಿಗಾಗಿ ಇಷ್ಟೊಂದು ಜನ ಸೇರಿರುವುದು ಗಮನಿಸಿದಾಗ ಅಪ್ಪಾಜಿಗೌಡರು ಹೇಗೆ ಬದುಕಿದ್ದರು ಎಂದು ತೋರಿಸುತ್ತಿದೆ. ಮನುಷ್ಯನ ಬದುಕು ಸಾರ್ಥಕವಾಗುವುದು ಎಷ್ಟು ವರ್ಷ ಬದುಕಿದ ಅಂತಲ್ಲ. ಹೇಗೆ ಬದುಕಿದ ಅಂತಾ.
ಶ್ರೀ ಬಸವನಾಗಿ ಶರಣರು, ಛಲವಾದಿ ಜಗದ್ಗುರು ಪೀಠ, ಚಿತ್ರದುರ್ಗ : ಪ್ರತಿ ಹಳ್ಳಿಯಲ್ಲೂ ಎಂ.ಜೆ.ಅಪ್ಪಾಜಿ ಗೌಡ ಅವರ ಭಾವಚಿತ್ರವನ್ನು ಕಂಡಿದ್ದೇನೆ. ಎಲ್ಲೆಲ್ಲೂ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇದರು ಅವರು ಜನಪರವಾಗಿರುವುದಕ್ಕೆ ಸಾಕ್ಷಿಯಾಗಿದೆ. ಬಡವರ ಕಷ್ಟವನ್ನು ಸ್ವತಃ ಅನುಭವಿಸಿ ಶಾಸಕರಾಗಿದ್ದರು. ಅದಕ್ಕಾಗಿ ಜನಮುಖಿಯಾಗಿ, ಮತದಾರರನ್ನು ಒಡಹುಟ್ಟಿದವರಂತೆ ಬಾಂಧವ್ಯದಿಂದ ಕಂಡಿದ್ದರು.
ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಂಜಾರ ಪೀಠ : ಅಪ್ಪಾಜಿಗೌಡರನ್ನು ನಾವು ಬಂಡೆಗೆ ಹೋಲಿಸುತ್ತಿದ್ದೆವು. ಕಾರ್ಮಿಕರಾಗಿ ಕೆಲಸ ಮಾಡಿ, ನೋವು, ದುಃಖದಲ್ಲಿರುವವರನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದರು. ಶಾಸಕರಾಗಿ ಇರದೆ ಸೇವನಂತೆ ಇದ್ದರು. ಅವರ ಹೆಸರು, ಸೇವಾ ಮನೋಭವವನ್ನು ಅವರ ಕುಟುಂಬ ಮುಂದುವರೆಸಿಕೊಂಡು ಹೋಗಲು ಶಕ್ತಿಯನ್ನು ದೇವರು ನೀಡಬೇಕಿದೆ.
ಮೌಲಾನ ಶಾ ಉಲ್ ಹಮೀದ್, ದಾರುಲ್ ಹಸನ್ ಮದರಸಾದ ಪ್ರಾಂಶುಪಾಲರು : ಭದ್ರಾವತಿಯಲ್ಲಿ ಜನಮನಸುಗಳಲ್ಲಿ ಒಮ್ಮೆಯು ಸಹ ಮರೆಮಾಚಲಾಗದ ವ್ಯಕ್ತಿತ್ವ. ಈ ಮಾತು ವೇದಿಕೆ, ಭಾಷಣ, ಬರಹಕ್ಕೆ ಸೀಮಿತವಲ್ಲ. ಅವರು ನಿಜವಾಗಿಯು ಸಾಧಿಸಿ ತೋರಿಸಿದ್ದರು. ಜಾತಿ, ಧರ್ಮ, ಮೇಲು, ಕೀಳು, ವರ್ಣಗಳನ್ನು ನೋಡದೆ ಸದಾ ಜನರೊಂದಿಗೆ ಬೆರೆತಿದ್ದರು.
ಶ್ರೀ ಲಕ್ಷ್ಮಣಾಚಾರ್ಯ ಸ್ವಾಮೀಜಿ, ಅಚಲ ಸದ್ಗುರು ಆಶ್ರಮ, ಭದ್ರಾವತಿ : ಬಸ್ ನಿಲ್ದಾಣವಿರಲಿಲ್ಲ ಭದ್ರಾವತಿಯಲ್ಲಿ. ಅದನ್ನು ನಿರ್ಮಿಸಿದರು ಅಪ್ಪಾಜಿ. ಸೇತುವೆ, ಪ್ರತಿ ಹಳ್ಳಿಗೆ ಸಿಮೆಂಟ್ ರಸ್ತೆ, ಬೀದಿ ಬೀದಿಯಲ್ಲೂ ಆರ್ಚ್, ಬಸ್ ನಿಲ್ದಾಣಗಳನ್ನು ನಿರ್ಮಿಸಿದರು. ಜಾತಿ ಬೇಧವಿಲ್ಲದೆ ಸಮಾನವಾಗಿ ಕಂಡರು.
ರೆವರೆಂಡ್ ಜಿ.ಸ್ಟಾನ್ಲಿ, ಫಾದರ್ : ಅಪ್ಪಾಜಿಗೌಡರು ಪ್ರತಿಯೊಬ್ಬರಲ್ಲು ದೇವರನ್ನು ಕಂಡರು. ಮಾತು ಜೋರಿದೆ. ಹೃದಯ ಮೃದು. ಭದ್ರಾವತಿಯಲ್ಲಿ ಇರುವುದು ಮೂರು ಚರ್ಚ್ಗಳು. ಅಪ್ಪಾಜಿಗೌಡರ ಕಾರಣದಿಂದ ಚರ್ಚುಗಳು ಅಭಿವೃದ್ಧಿಯಾಗಿದೆ. ದೇವರು ಇಂತಹವರನ್ನು ಮತ್ತೆ ಭದ್ರಾವತಿಲ್ಲಿ ಹುಟ್ಟಿಸಲಿ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]