ತುಂಗಾ – ಭದ್ರಾ ನದಿ ಪಾತ್ರದಲ್ಲಿ ನಿಷೇಧಾಜ್ಞೆ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 APRIL 2024

BHADRAVATHI : ತುಂಗಾ-ಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಭದ್ರಾವತಿ ತಹಶೀಲ್ದಾರ್‌ ಕೆ.ಆರ್‌.ನಾಗರಾಜು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎಲ್ಲೆಲ್ಲಿ ನಿಷೇಧ? ಕಾರಣವೇನು?

ತಾಲೂಕಿನ ಡಣಾಯಕಪುರ, ಸಿದ್ಲೀಪುರ, ಸನ್ಯಾಸಿಕೊಡಮಗ್ಗಿ, ಮಂಗೋಟೆ, ಆನವೇರಿ, ವಡೇರಪುರ (ನಿಂಬೆಗೊಂದಿ) ಗ್ರಾಮಗಳಲ್ಲಿ ತುಂಗಾ – ಭದ್ರಾ ನದಿ ಪಾತ್ರಕ್ಕೆ ಅಕ್ರಮ ಪ್ರವೇಶವನ್ನು ನಿಷೇಧಿಸಲಾಗಿದೆ.

ಈ ಹಿಂದೆ ಇಲ್ಲಿನ ನಿಕ್ಷೇಪಗಳಲ್ಲಿ ಗಣಿಗಾರಿಕೆ ನಡೆಸಲು ಹರಾಜು ಮೂಲಕ 5 ವರ್ಷ ಅವಧಿಗೆ ವಿಲೇವಾರಿ ಮಾಡಲಾಗಿತ್ತು. ಅವಧಿ ಮುಗಿದರು ಅಕ್ರಮವಾಗಿ ಮರಳು ಗಣಿಗಾರಿಕೆ ಮುಂದುವರಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವರದಿ ಸಲ್ಲಿಸಿದ್ದರು. ಅಲ್ಲದೆ ಇಲ್ಲಿನ ನಿಕ್ಷೇಪಗಳನ್ನು ಹರಾಜು ಮೂಲಕ ವಿಲೇಪಡಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆ ತಹಶೀಲ್ದಾರ್‌ ಅವರು ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ – ನೆಹರೂ ರಸ್ತೆಯಲ್ಲಿ ಆಟೋ ಚಾಲಕನ ತಲೆಗೆ ದೊಣ್ಣೆಯಿಂದ ಹೊಡೆದ ಮತ್ತೊಬ್ಬ ಆಟೋ ಚಾಲಕ

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment