ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಜುಲೈ 2020
ಎರಡು ಆಲೆಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ, ಪ್ರಕರಣ ದಾಖಲಿಸಿದೆ. ಸಕ್ಕರೆ ಬಳಸಿ ಬೆಲ್ಲ ತಯಾರಿಸುತ್ತಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೂಡ್ಲಿಗೆರೆ ಹೋಬಳಿಯ ಅರಳಿಹಳ್ಳಿ ಮತ್ತು ಕಾಗೆಹಳ್ಳ ಗ್ರಾಮದ ಎರಡು ಆಲೆಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಕಬ್ಬು ಬಳಸಿ ಬೆಲ್ಲ ತಯಾರಿಸಬೇಕು. ಆದರೆ ಈ ಆಲೆ ಮನೆಗಳಲ್ಲಿ ಸಕ್ಕರೆ ಬಳಸಿ ಬೆಲ್ಲ ಸಿದ್ಧಪಡಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಒಂದು ಆಲೆಮನೆಯಲ್ಲಿ 150 ಮೂಟೆ ಸಕ್ಕರೆ, ಮತ್ತೊಂದರಲ್ಲಿ 70 ಮೂಟೆ ಸಕ್ಕರೆ ದಾಸ್ತಾನು ಇತ್ತು. ಇದನ್ನು ವಶಕ್ಕೆ ಪಡೆಯಲಾಗಿದ್ದು. ಆಲೆಮನೆಯನ್ನು ಸೀಜ್ ಮಾಡಿ, ಪ್ರಕರಣ ದಾಖಲಿಸಲಾಗಿದೆ.
ತಹಶೀಲ್ದಾರ್ ಶಿವಕುಮಾರ್, ಉಪ ತಹಶೀಲ್ದಾರ್ ಮಂಜಾನಾಯ್ಕ್, ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ದೇವೇಂದ್ರಪ್ಪ ಸೇರಿದಂತೆ ಹಲವರು ದಾಳಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]