ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 22 ಜುಲೈ 2019
ಕುವೆಂಪು ವಿಶ್ವವಿದ್ಯಾಲಯದ ಪ್ರೊಫೆಸರ್ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು, ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಒಂದೇ ದಿನದಲ್ಲಿ ಬಂಧಿಸಿದ್ದಾರೆ. ಈತನಿಂದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.
ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಕ್ಯಾಂಪಸ್’ನ ಸಿಬ್ಬಂದಿಗಳ ಕ್ವಾರ್ಟರ್ಸ್’ನಲ್ಲಿ ಕಳ್ಳತನವಾಗಿತ್ತು. ಪ್ರೊಫೆಸರ್ ನಮ್ರತಾ ಅವರ ಮನೆಯಲ್ಲಿದ್ದ 7.87 ಲಕ್ಷ ರೂ. ಮೌಲ್ಯದ 217.5 ಗ್ರಾಂ ತೂಕದ ಬಂಗಾರ ಮತ್ತು ವಜ್ರದ ಆಭರಣಗಳು ಕಳುವಾಗಿದ್ದವು.
ಜುಲೈ 20ರಂದು ಕಳ್ಳತನವಾಗಿತ್ತು. ತನಿಖೆ ಆರಂಭಿಸಿದ್ದ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಧಾರವಾಡದ ಕಲಘಟಗಿ ಬೊಮ್ಮಿಗಟ್ಟೆಯ ಅನಿಲ್ ಕುಮಾರ್ ಬಂಧಿತ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]