ಒಂದೂವರೆ ಕೋಟಿ ಮೌಲ್ಯದ ಅಡಿಕೆ ನಾಪತ್ತೆ, ಆಗಿದ್ದೇನು?

Published On : ಮಾರ್ಚ್ 31, 2026

Published By : ನಿತಿನ್‌ ಆರ್‌.ಕೈದೊಟ್ಲು 

ಹೊಳೆಹೊನ್ನೂರು: ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ₹1.50 ಕೋಟಿ ಮೌಲ್ಯದ ಅಡಿಕೆಯನ್ನು (arecanut) ಚಾಲಕ ಮತ್ತು ಆತನ ಸಹಚರರು ಸೇರಿ ಲಪಟಾಯಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ.

ಇದನ್ನೂ ಓದಿ : ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಶಿವಮೊಗ್ಗದ ಮ್ಯಾಮ್‌ಕೋಸ್‌ನಿಂದ ಬೆಂಗಳೂರಿನ ಯಶವಂತಪುರಕ್ಕೆ 350 ಚೀಲ ಅಡಿಕೆ ಲೋಡ್‌ ಮಾಡಿಕೊಂಡು ಲಾರಿ ತೆರಳಿತ್ತು. ಆದರೆ ಚಾಲಕ ಮತ್ತು ಆತನ ಸಹಚರರು ನಿಗದಿತ ಸ್ಥಳಕ್ಕೆ ಅಡಿಕೆ ತಲುಪಿಸದೆ ಲಾರಿಯೊಂದಿಗೆ ಪರಾರಿಯಾಗಿದ್ದಾರೆ. ಕಳುವಾದ ಅಡಿಕೆಯ ಒಟ್ಟು ಅಂದಾಜು ಮೌಲ್ಯ ₹1,50,21,760 ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 31, 2026

Leave a Comment