ಶಿವಮೊಗ್ಗ ಲೈವ್.ಕಾಂ | 9 ಮೇ 2019
ಶಿವಮೊಗ್ಗ – ಭದ್ರಾವತಿ ನಡುವೆ ಸಂಚರಿಸುವ ಕೆಎಸ್ಆರ್’ಟಿಸಿ ಬಸ್’ನಲ್ಲಿ ಏಳು ಕೆ.ಜಿ. ಗಾಂಜಾ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರು, ಗಾಂಜಾ ಸಾಗಿಸುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.
ಗಾಂಜಾ ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಲಭ್ಯವಾಗಿದ್ದ ಮಾಹಿತಿ ಮೇರೆಗೆ, ಭದ್ರಾವತಿ ಬೈಪಾಸ್ ಬಳಿಯ ಬಿಳಕಿಯಲ್ಲಿ KSRTC ಬಸ್ ತಡೆದಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಬಳಿ ಇದ್ದ ಪ್ಯಾಕೆಟನ್ನು ವಶಕ್ಕೆ ಪಡೆದು, ಪ್ರಶ್ನಿಸಿದ್ದಾರೆ. ಆದರೆ ಮಾಹಿಳೆ ಸಮರ್ಪಕ ಉತ್ತರ ನೀಡದಿದ್ದರಿಂದ, ಅದನ್ನು ಬಿಡಿಸಿ ನೋಡಿದಾಗ, ಗಾಂಜಾ ಇರುವುದು ಪತ್ತೆಯಾಗಿದೆ.
ಗಾಂಜಾ ಸಾಗಿಸುತ್ತಿದ್ದ ನಹೀಮಾ ಖಾನ್ ಎಂಬ ಮಹಿಳೆಯನ್ನು ಬಂಧಿಸಲಾದೆ. ಈಕೆ ಭದ್ರಾವತಿ ತಾಲೂಕಿನ ಗೌಡರಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ. ಫ್ಯಾನ್ಸಿ ವಸ್ತುಗಳ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾಳೆ.
ಅನುಮಾನ ಬಾರದಂತೆ ಗಾಂಜಾ ಪ್ಯಾಕ್
ನಹೀಮಾ ಖಾನ್ ಸಾಗಿಸುತ್ತಿದ್ದ ಗಾಂಜಾವನ್ನು ಅನುಮಾನ ಬಾರದಂತೆ ಪ್ಯಾಕ್ ಮಾಡಲಾಗಿತ್ತು. ಏಳು ಕೆಜಿಯಷ್ಟು ಗಾಂಜಾವನ್ನು, ಪೇಪರ್’ನಲ್ಲಿ ಪ್ಯಾಕ್ ಮಾಡಿ, ಅದರ ಮೇಲೆ, ಖಾಕಿ ಬಣ್ಣದ ಟೇಪ್ ಅಂಟಿಸಲಾಗಿತ್ತು. ಆನ್’ಲೈನ್ ಮೂಲಕ ಖರೀದಿಸುವ ವಸ್ತುಗಳು ಬಂದಾಗ ಪ್ಯಾಕ್ ಮಾಡುವ ರೀತಿಯಲ್ಲೇ, ಗಾಂಜಾ ಪ್ಯಾಕ್ ಮಾಡಲಾಗಿತ್ತು.
ಡಿಸಿಐಬಿ ಪೊಲೀಸರು ದಾಳಿ ನಡೆಸಿದ್ದು, ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]