ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 18 JULY 2023
BHADRAVATHI : ಗುಟ್ಕಾ ತಿಂದು ಕಂಡ ಕಂಡಲ್ಲಿ ಉಗುಳುವವರಿಗೇನು (spitting gutka) ಕಮ್ಮಿಯಿಲ್ಲ. ನ್ಯಾಯಾಲಯದ ಆವರಣದಲ್ಲಿ ಗುಟ್ಕಾ ಜಗಿದು ಗೋಡೆಗೆ ಉಗಿದ ವ್ಯಕ್ತಿಯೊಬ್ಬನಿಗೆ ನ್ಯಾಯಾಧೀಶರು ತಕ್ಕ ಪಾಠ ಕಲಿಸಿದ್ದಾರೆ. ಆತನಿಂದಲೇ ಗೋಡೆ ಸ್ವಚ್ಛಗೊಳಿಸಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಭದ್ರಾವತಿ ನ್ಯಾಯಾಲಯದಲ್ಲಿ ಸೋಮವಾರ ಘಟನೆ ಸಂಭವಿಸಿದೆ. ಹಿರಿಯ ಸಿವಿಲ್ ನ್ಯಾಯಾಲಯದ ಹೊರ ಆವರಣದಲ್ಲಿ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ಗೋಡೆ ಮೇಲೆ ಉಗುಳಿದ್ದ (spitting gutka). ಇದನ್ನು ಗಮನಿಸಿದ ನ್ಯಾಯಾಧೀಶರು ಆತನನ್ನು ಕರೆಸಿ ಬುದ್ದಿವಾದ ಹೇಳಿದ್ದಾರೆ. ಅಲ್ಲದೆ ಗೋಡೆ ಸ್ವಚ್ಛಗೊಳಿಸುವಂತೆ ಆದೇಶಿಸಿದರು. ಬಕೆಟ್‌ನಲ್ಲಿ ನೀರು ತಂದು ಆತ ಗೋಡೆಯನ್ನು ಸ್ವಚ್ಛಗೊಳಿಸಿದ್ದಾನೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಶಿವಮೊಗ್ಗ KSRTC ಬಸ್ ನಿಲ್ದಾಣದ ಬಳಿ ಬೆಳಗ್ಗೆ ಯುವತಿ ‘ಕಿಡ್ನಾಪ್’, ಸಂಜೆ ವೇಳೆಗೆ ಪ್ರಕರಣಕ್ಕೆ ಟ್ವಿಸ್ಟ್, ಏನದು?
ಬೋರ್ಡ್ ಹಾಕಿದ್ದರು ಕ್ಯಾರೆ ಇಲ್ಲ
ನ್ಯಾಯಾಲಯಕ್ಕೆ ಬರುವ ಕೆಲವರು ಗುಟ್ಕಾ, ಎಲೆ ಅಡಿಕೆ ಜಗಿದು ಗೋಡೆಗಳ ಮೇಲೆ ಉಗುಳುತ್ತಿದ್ದಾರೆ. ಈ ಹಿನ್ನೆಲೆ ನ್ಯಾಯಾಲಯದ ಆವರಣದಲ್ಲಿ ಗೋಡೆಗಳ ಮೇಲೆ ಉಗುಳದಂತೆ ಬೋರ್ಡ್ ಕೂಡ ಹಾಕಲಾಗಿದೆ. ಹಾಗಿದ್ದು ಕೆಲವರು ಇದಕ್ಕೆ ಕ್ಯಾರೆ ಅನ್ನದೆ ಉಗುಳುವುದನ್ನು ಮುಂದುವರೆಸಿದ್ದರು. ಸೋಮವಾರದ ಘಟನೆ ಉಳಿದವರೆಗೆ ಎಚ್ಚರಿಕೆ ಪಾಠವಾಗಿದೆ.
ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ಎಲೆ – ಅಡಿಕೆ ಅಗಿದು ಉಗುಳುವುದು ಸಾಮಾನ್ಯವಾಗಿದೆ. ಇಲ್ಲಿಯು ಇದೆ ರೀತಿ ಸ್ವಚ್ಚಗೊಳಿಸುವ ಪರಿಪಾಠ ಮುಂದುವರೆದರೆ ಒಳಿತು ಅನ್ನುವುದು ಸಾರ್ವಜನಿಕ ಅಭಿಪ್ರಾಯ.