ಪೊಲೀಸ್ ಠಾಣೆಯಲ್ಲೇ ಸಿಬ್ಬಂದಿ ಮೇಲೆ ಹಲ್ಲೆ, ಜೀವ ಬೆದರಿಕೆ, ಇಬ್ಬರು ಅರೆಸ್ಟ್, ಏನಿದು ಕೇಸ್?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 8 NOVEMBER 2022

HOSANGAGAR : ಪೊಲೀಸ್ ಠಾಣೆಯಲ್ಲೇ (police station) ಸಿಬ್ಬಂದಿಗಳಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿ, ಸಮವಸ್ತ್ರ ಹರಿದ ಆರೋಪಿಗಳನ್ನು ಬಂಧಿಸಲಾಗಿದೆ.

Shimoga Nanjappa Hospital

ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ ಘಟನೆ ಸಂಭವಿಸಿದೆ. ರಾಮಚಂದ್ರ ಮತ್ತು ಆತನ ಸಹೋದರ ಕೃಷ್ಣಮೂರ್ತಿ ಎಂಬುವವರು ಬಂಧಿತರು.

police station

ಏನಿದು ಪ್ರಕರಣ?

ಪ್ರಕರಣ ಒಂದರ ವಿಚಾರಣೆಗಾಗಿ ರಾಮಚಂದ್ರ ಮತ್ತು ಆತನ ಸಹೋದರ ಕೃಷ್ಣಮೂರ್ತಿಯನ್ನು ಪೊಲೀಸರು ನಗರ ಠಾಣೆಗೆ ಕರೆಸಿದ್ದರು. ವಿಚಾರಣೆ ವೇಳೆ ರಾಮಚಂದ್ರ ಮತ್ತು ಕೃಷ್ಣಮೂರ್ತಿ, ಪಿಎಸ್ಐ ನಾಗರಾಜ್, ಸಿಬ್ಬಂದಿ ವೆಂಕಟೇಶ್ ಮತ್ತು ದೇವರಾಜ್ ನಾಯ್ಕ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಸಿಬ್ಬಂದಿಯನ್ನು ಎಳೆದಾಡಿ, ಸಮವಸ್ತ್ರವನ್ನು ಹರಿದು ಹಾಕಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ ಭೀಕರ ಅಪಘಾತ, 4 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಈ ಸಂಬಂಧ ಪೊಲೀಸ್ ಸಿಬ್ಬಂದಿ ದೇವರಾಜ್ ನಾಯ್ಕ್ ಅವರು ದೂರು ನೀಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ, ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa HOspital

ADVERTISEMENT police station

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

https://blogger.googleusercontent.com/img/b/R29vZ2xl/AVvXsEgKW-CC3OJOj6nliJ_Z34KG8m8tw_YoOXtzIPYt6AuDJxZ_aUKNUux9bP_awZKcroMw-5uVxFW_MEG7xN30pEgEGDrf_NvLP0D5af4w1eDDSjuClMS0kp5D_XLq3ZROBrH7wVzIqBaZwbCeWR17NPT33aS1qemKBjT7IqPJpI1fzMVQqcXL-H7jzX2tPg/s926/NANJAPPA_Knee-Deep-in-Pain-_-926-X-521-Kannada.png

Leave a Comment