SHIVAMOGGA LIVE NEWS | 23 MARCH 2023
RIPPONPETE : ಖಾಸಗಿ ಬಸ್ ಮತ್ತು ಬೊಲೇರೋ ಗೂಡ್ಸ್ ಗಾಡಿ ಮಧ್ಯೆ ಡಿಕ್ಕಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬೊಲೇರೋ (Bolero) ವಾಹನ ಎರಡು ಭಾಗವಾಗಿದೆ.
ಹೊಸನಗರ ತಾಲೂಕು ರಿಪ್ಪನ್ ಪೇಟೆ ಸಮೀಪದ ಗೊಬ್ಬರಗುಂಡಿ ಬಳಿ ಘಟನೆ ಸಂಭವಿಸಿದೆ. ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಬೊಲೇರೋಗೆ (Bolero) ಡಿಕ್ಕಿಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಪಘಾತ ಸಂಭವಿಸಿ ಬಸ್ ರಸ್ತೆ ಪಕ್ಕದ ಜಾಗಕ್ಕೆ ನುಗ್ಗಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದವರಿಗೆ ಯಾವುದೆ ಸಮಸ್ಯೆಯಾಗಿಲ್ಲ. ಬೊಲೇರೋ ವಾಹನದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಅನಾವರಣಗೊಳ್ಳಲಿದೆ ಛತ್ರಪತಿ ಶಿವಾಜಿ ಪುತ್ಥಳಿ, ಎಲ್ಲಿ? ಯಾವಾಗ?