ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | HOSANAGARA | 27 ನವೆಂಬರ್ 2019
ಪತ್ನಿಯ ನಿರ್ಲಕ್ಷ್ಯ ಮತ್ತು ದುಡುಕುತನದಿಂದಾಗಿ ಅಪಘಾತ ಸಂಭವಿಸಿದೆ. ಆಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತಿಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೊಸನಗರದ ರಾಮಚಂದ್ರಾಪುರ ಗ್ರಾಮದ ಬಳಿ ಮಂಗಳವಾರ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಕಾರು ಫುಲ್ ಜಖಂ
ಕಾರು ಸೇತುವೆಯಿಂದ ಕೆಳಗೆ ಪಲ್ಟಿಯಾಗಿ ಬಿದ್ದಿದೆ. ಕಾರಿನ ಮುಂಭಾಗ, ಹಿಂಬದಿ ಸಂಪೂರ್ಣ ಜಖಂ ಆಗಿದೆ. ಪಲ್ಟಿ ಆಗಿ ಬಿದ್ದಿದ್ದರಿಂದ ಕಾರಿನ ಮೇಲ್ಬಾಗಕ್ಕೂ ಹಾನಿಯಾಗಿದೆ.
ಹೆಂಡತಿ ವಿರುದ್ಧವೇ ಕಂಪ್ಲೇಂಟ್
ಉಡುಪಿಯ ಹೆಬ್ರಿಯ ನಾಗರಾಜ್ ತಮ್ಮ ಪತ್ನಿ ಮಂಜುಳಾ, ಮಗ ಈಶಾನ್, ಪತ್ನಿಯ ಅಕ್ಕನ ಮಗಳು ಸುಪ್ರಭ ಅವರೊಂದಿಗೆ ಸಂಬಂಧಿಯೊಬ್ಬರ ಮನೆಗೆ ತೆರಳುತ್ತಿದ್ದರು. ಪತ್ನಿ ಮಂಜುಳಾ ಅವರೆ ಕಾರು ಚಲಾಯಿಸುತ್ತಿದ್ದರು ಎಂದು ನಾಗರಾಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪತ್ನಿಯ ನಿರ್ಲಕ್ಷ್ಯದಿಂದಾಗಿಯೇ ಅಪಘಾತ ಸಂಭವಿಸಿದೆ. ಹಾಗಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕಂಪ್ಲೇಂಟ್ ನೀಡಿದ್ದಾರೆ.
ಘಟನೆ ಸಂಬಂಧ ಹೊಸನಗರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
A Car met with an accident in Ramachandrapura Village in Hosanagara Taluk. Husband complained about his wife’s negligence driving and requested to take action.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422