ಹೊಂಬುಜದಲ್ಲಿ ವಿಜೃಂಭಣೆಯ ರಥೋತ್ಸವ, ಹೇಗಿತ್ತು ವೈಭವ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ರಿಪ್ಪನ್‌ಪೇಟೆ : ಹೊಂಬುಜ (Hombuja) ಕ್ಷೇತ್ರದ ಶ್ರೀ ಪದ್ಮಾವತಿ ದೇವಿ ಹಾಗೂ ಶ್ರೀ ಪಾರ್ಶ್ವನಾಥ ತೀರ್ಥಂಕರರ ವಾರ್ಷಿಕ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶನಿವಾರ ಮುಂಜಾನೆಯಿಂದ ಕ್ಷೇತ್ರ ದೇವತೆಗಳಿಗೆ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ 12.53ಕ್ಕೆ ಶ್ರೀ ಪದ್ಮಾವತಿ ದೇವಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿ ಉತ್ಸವ ಮೂರ್ತಿಗಳ ಮಹಾರಥೋತ್ಸವ ನಡೆಯಿತು. ರಾಜ್ಯ ಹೊರರಾಜ್ಯಗಳಿಂದ ಆಗಮಿಸಿದ ಸಾವಿರಾರು ಭಕ್ತರು ದೇವಿಯ ಜಯಘೋಷದೊಂದಿಗೆ ಭಾವಪರವಶರಾದರು.

ಜಾತ್ರಾ ಮಹೋತ್ಸವದಲ್ಲಿ ಶ್ರೀ 108 ಕುಂಥುಸಾಗರ ಮಹಾರಾಜ್, ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿದಂತೆ ಅನೇಕ ಮುನಿವರ್ಯರು ಪಾಲ್ಗೊಂಡಿದ್ದರು. ವಿವಿಧ ರೀತಿಯ ಮಂಗಳ ವಾದ್ಯ, ಜಾನಪದ ಕಲಾತಂಡಗಳು ಹಾಗೂ ದೇವಿಗೆ ಚಾಮರ ಬೀಸುವ ಗಜರಾಜನು ಜಾತ್ರಾ ಮಹೋತ್ಸಕ್ಕೆ ಹೆಚ್ಚಿನ ಮೆರುಗು ನೀಡಿತು.

Hombuja-temple-ratotsava-in-ripponpete

ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ಸಂಚರಿಸಿದಾಗ ಗ್ರಾಮಸ್ಥರು ದೇವರಿಗೆ ಹಣ್ಣು ಕಾಯಿ, ನೈವೇದ್ಯ ಅರ್ಪಿಸಿದರು. ಹಣ್ಣು ಮತ್ತು ಹೂವುಗಳನ್ನು ರಥಕ್ಕೆ ಬೀರುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿ‌ದರು. ಮಠದ ಗಜಲಕ್ಷ್ಮಿ ಐಶ್ವರ್ಯಾ ಭಕ್ತಿಯ ವಂದನೆ ಸಲ್ಲಿಸಿತು.  ಸುಡುವ ಬಿಸಿಲಿನ ನಡುವೆಯೂ ನೆರೆದ ಸಹಸ್ರಾರು ಭಕ್ತರು ದೇವಿಯ ರಥ ಎಳೆದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ಶ್ರೀಕಾಂತ್‌ ಜನ್ಮದಿನಾಚರಣೆ, ಹೇಗಿತ್ತು ಸಂಭ್ರಮ? ಯಾರೆಲ್ಲ ಏನೆಲ್ಲ ಹೇಳಿದರು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment