ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 ಆಗಸ್ಟ್ 2020
ನಗರ ಹೋಬಳಿಯಲ್ಲಿ ಧರೆ ಕುಸಿದಿದ್ದು ಯಡೂರು – ಮಾಗಲು ಸಂಪರ್ಕ ಕಡಿತಗೊಂಡಿದೆ. ಮೆಕೇರಿ ಮಾರ್ಗವಾಗಿ ಮಾಗಲು ಗ್ರಾಮಕ್ಕೆ ಸಾಗುವ ಮಾರ್ಗದಲ್ಲಿ ಮಣ್ಣು ಕುಸಿದಿದೆ.
ಇದರಿಂದ ಈ ಗ್ರಾಮದಲ್ಲಿರುವ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಮಾಗಲು ಗ್ರಾಮದಲ್ಲಿ ಎಂಟತ್ತು ಕುಟುಂಬಗಳಿವೆ. ಧರೆ ಕುಸಿತದಿಂದಾಗಿ ಈ ಭಾಗದ ಜನರಿಗೆ ಇದ್ದ ಏಕೈಕ ಸಂಪರ್ಕ ಮಾರ್ಗ ಇದಾಗಿತ್ತು.
ಧರೆ ಕುಸಿತದಿಂದಾಗಿ ಮಣ್ಣು ಸಂಪೂರ್ಣವಾಗಿ ರಸ್ತೆಯನ್ನು ಆವರಿಸಿದೆ. ಹಾಗಾಗಿ ವಾಹನ ಸಂಚಾರ ಕಷ್ಟವಾಗಿದೆ. ಗಾಳಿ ಮಳೆಯಿಂದಾಗಿ ಈ ಭಾಗದಲ್ಲಿ ಧರೆ ಕುಸಿದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]