ಕೆರೆಗೆ ನುಗ್ಗಿ ಅರ್ಧ ಮುಳುಗಿದ ಕಾರು, ಅದೃಷ್ಟವಶಾತ್‌ ದಂಪತಿ, ಮಗಳು ಪಾರು, ಹೇಗಾಯ್ತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 NOVEMBER 2023

RIPPONPETE : ಚಾಲಕನ ನಿಯಂತ್ರಣ ತಪ್ಪಿದ ಕಾರು (Car) ಕೆರೆಗೆ ನುಗ್ಗಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ತಾವರೆಕೆರೆಯಲ್ಲಿ ಘಟನೆ ಸಂಭವಿಸಿದೆ.

ಕಾರಿನಲ್ಲಿದ್ದವರು ಬೆಂಗಳೂರಿನಿಂದ ರಿಪ್ಪನ್‌ಪೇಟೆ ಮೂಲಕ ಸೊನಲೆ ಗ್ರಾಮಕ್ಕೆ ತೆರಳುತ್ತಿದ್ದರು. ರಿಪ್ಪನ್‌ಪೇಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೀದ ತಾವರೆಕೆರೆಗೆ ನುಗ್ಗಿದೆ. ಕಾರಿನಲ್ಲಿ ದಂಪತಿ ಮತ್ತು ಮಗಳು ಇದ್ದರು. ಅವಘಡ ಸಂಭವಿಸುತ್ತಿದ್ದಂತೆ ಮೂವರು ಕಾರಿನಿಂದ ಹೊರಗೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳೀಯರು ಲಾರಿ ಬಳಸಿ ಕಾರನ್ನು ಕೆರೆಯಿಂದ ಹೊರಗೆ ತೆಗೆದಿದ್ದಾರೆ.

ಇದನ್ನೂ ಓದಿ- GOOD NEWS | ಕೃಷಿ, ತೋಟಗಾರಿಕೆ ವಿವಿಯಲ್ಲಿನ ಬ್ಯಾಡಗಿ ಮೆಣಸಿನಕಾಯಿಯ ಸಂಶೋಧನೆಗೆ ಪೇಟೆಂಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment