ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 20 JULY 2024
DAM LEVEL : ಹೊಸನಗರದಲ್ಲಿ ಮಳೆ ಪ್ರಮಾಣದ ತುಸು ತಗ್ಗಿದೆ. ಆದರೆ ಅಬ್ಬರ ಮುಂದುವರೆದಿದೆ. ತಾಲೂಕಿನಲ್ಲಿರುವ ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. ಚಕ್ರಾ ಜಲಾಶಯದಿಂದ ಲಿಂಗನಮಕ್ಕಿ ಡ್ಯಾಮ್‌ಗೆ ನೀರು ಹರಿಯುವುದು ಮುಂದುವರೆದಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಹೊಸನಗರ ತಾಲೂಕಿನ ಮಾನಿ ಜಲಾಶಯ ವ್ಯಾಪ್ತಿಯಲ್ಲಿ 108 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 105 ಮಿ.ಮೀ, ಹುಲಿಕಲ್‌ನಲ್ಲಿ 149 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 167 ಮಿ.ಮೀ, ಚಕ್ರಾದಲ್ಲಿ 125 ಮಿ.ಮೀ, ಸಾವೇಹಕ್ಲುವಿನಲ್ಲಿ 140 ಮಿ.ಮೀ ಮಳೆಯಾಗಿದೆ.

ಜಲಾಶಯಗಳಿಗೆ ಉತ್ತಮ ಒಳಹರಿವು
ಮಾನಿ ಅಣೆಕಟ್ಟೆಗೆ 7414 ಕ್ಯೂಸೆಕ್ ಒಳ ಹರಿವು, ಪಿಕಪ್ ಡ್ಯಾಗೆ 3140 ಕ್ಯೂಸೆಕ್ ಒಳ ಹರಿವು ಇದೆ. ಸಾವೇಹಕ್ಲು ಡ್ಯಾಮ್‌ಗೆ 3104 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಚಕ್ರಾ ಜಲಾಶಯಕ್ಕೆ 3649 ಕ್ಯೂಸೆಕ್ ಒಳ ಹರಿವು ಇದೆ. ಗೇಟುಗಳನ್ನು ಒಂದು ಮೀಟರ್ ಮೇಲೆತ್ತಲಾಗಿದೆ. 1658 ಕ್ಯೂಸೆಕ್ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಲಾಗುತ್ತಿದೆ.
ಇದನ್ನೂ ಓದಿ ⇓
ಭದ್ರಾ ಡ್ಯಾಮ್‌ಗೆ ಭರಪೂರ ನೀರು, ಏರಿತು ತುಂಗಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು, ಎಷ್ಟಾಗಿದೆ?
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





