ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
HOSANAGARA, 31 JULY 2024 : ಹೊಸನಗರ ತಾಲೂಕಿನ ವಿವಿಧೆಡೆ ಮಂಗಳವಾರ ಮಳೆ ಅಬ್ಬರ ಜೋರಾಗಿತ್ತು. ನಗರ ಹೋಬಳಿ ವ್ಯಾಪ್ತಿಯ ಹಲವು ಕಡೆ ಎಡೆಬಿಡದೆ ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟಾಗಿದೆ ಮಳೆ?
ಕಳೆದ 24 ಗಂಟೆಯಲ್ಲಿ ಚಕ್ರಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಚಕ್ರಾ ವ್ಯಪ್ತಿಯಲ್ಲಿ 201 ಮಿ.ಮೀ ಮಳೆಯಾಗಿದೆ. ಮಾನಿ 185 ಮಿ.ಮೀ, ಯಡೂರು 188 ಮಿ.ಮೀ, ಹುಲಿಕಲ್ 189 ಮಿ.ಮೀ, ಮಾಸ್ತಿಕಟ್ಟೆ 186 ಮಿ.ಮೀ, ಸಾವೇಹಕ್ಲು 155 ಮಿ.ಮೀ ಮಳೆಯಾಗಿದೆ.
ಜಲಾಶಯಗಳ ಒಳ ಹರಿವು ಎಷ್ಟಿದೆ?
ನಿರಂತರ ಮಳೆಯಿಂದಾಗಿ ಈ ಭಾಗದ ಜಲಾಶಯಗಳ ಒಳ ಹರಿವು ಏರಿಕೆಯಾಗಿದೆ. ಮಾನಿ ಡ್ಯಾಂಗೆ 10,788 ಕ್ಯೂಸೆಕ್ ಒಳ ಹರಿವು ಇದೆ. ಪಿಕ್ಅಪ್ಗೆ 4195 ಕ್ಯೂಸೆಕ್ ಒಳ ಹರಿವು ಇದೆ. ಚಕ್ರಾ ಜಲಾಶಯಕ್ಕೆ 1011 ಕ್ಯೂಸೆಕ್ ಒಳ ಹರಿವು, 1848 ಕ್ಯೂಸೆಕ್ ಹೊರ ಹರಿವು ಇದೆ. ಸಾವೇಹಕ್ಲುಗೆ 3509 ಕ್ಯೂಸೆಕ್ ಒಳ ಹರಿವು, 2007 ಕ್ಯೂಸೆಕ್ ಹೊರ ಹರಿವು ಇದೆ.
ಇದನ್ನೂ ಓದಿ ⇓
ಸಾಗರ, ತೀರ್ಥಹಳ್ಳಿಯಲ್ಲಿ ಹೆಚ್ಚು ಮಳೆ, ಭದ್ರಾವತಿಯಲ್ಲಿ ಕಡಿಮೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?






