ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019
ಹುಟ್ಟುಹಬ್ಬದ ಆಚರಣೆ ಅಂದರೆ ಪಾರ್ಟಿ ಮಾಡುವುದು. ಪಟಾಕಿ ಹೊಡೆದು ಸಂಭ್ರಮಿಸುವುದು. ಡಾನ್ಸ್ ಮಾಡಿ ಖುಷಿ ಪಡುವುದು. ಇದೆಲ್ಲ ಈಗಿನ ಟ್ರೆಂಡ್. ಆದರೆ ಹೊಸನಗರದ ಯುವಕರ ಗುಂಪೊಂದು ಡಿಫರೆಂಟ್ ರೀತಿಯಲ್ಲಿ ಹುಟ್ಟುಹಬ್ಬಗಳನ್ನು ಆಚರಿಸುತ್ತಿದೆ. ಇದು ಇಡೀ ತಾಲೂಕಿಗೆ ಕುತೂಹಲ ಮೂಡಿಸಿದೆ. ಜನರು ಭೇಷ್ ಅನ್ನುವಂತೆ ಮಾಡಿದೆ. ಆದರೆ ಇದೆಲ್ಲ ಶುರುವಾಗಿದ್ದು ಫೇಸ್’ಬುಕ್’ನಿಂದ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಯುವಕರ ಗುಂಪೊಂದು ತಮ್ಮ ಪರಿಚಿತರ ಹುಟ್ಟುಹಬ್ಬಗಳಿದ್ದರೆ ತಾಲೂಕಿನ ವಿವಿಧೆಡೆ ಶ್ರಮದಾನ ಮಾಡುತ್ತಿದೆ. ನಿಗದಿತ ಸ್ಥಳವನ್ನು ಸ್ವಚ್ಚ ಮಾಡಿ, ಅಲ್ಲಿಯೇ ಹುಟ್ಟುಹಬ್ಬ ಆಚರಿಸುತ್ತಾರೆ. ಮತ್ತೊಮ್ಮೆ ಸ್ವಚ್ಛತಾ ಕಾರ್ಯ ನಡೆಸುತ್ತದೆ.
ಯುವಕರ ಗುಂಪು ಎಲ್ಲೆಲ್ಲಿ ಕ್ಲೀನ್ ಮಾಡಿದೆ?
ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದ ಬಸ್ ನಿಲ್ದಾಣದ ಸುತ್ತಲು ಕಸದ ರಾಶಿ ಇತ್ತು. ಪುಟ್ಟ ಹುಡುಗಿ ಅರ್ಚನಾ ಕರ್ವಾಲ್ಲೋ ಹುಟ್ಟುಹಬ್ಬದಂದು ಈ ಬಸ್ ನಿಲ್ದಾಣವನ್ನು ಟಾರ್ಗೆಟ್ ಮಾಡಿಕೊಂಡಿತ್ತು ಆ ಯುವಕರ ಗುಂಪು. ಇಡೀ ದಿನ ಶ್ರಮದಾನದ ಬಳಿಕ ಬಸ್ ನಿಲ್ದಾಣಕ್ಕೆ ಹೊಸ ಕಳೆ ಬಂತು. ಕಸ ತೆರವಾಯ್ತು. ಕಳೆಗುಂದಿದ್ದ ನಿಲ್ದಾಣಕ್ಕೆ ಸುಣ್ಣ, ಬಣ್ಣ ಬಳಿದು ಕಂಗೊಳಿಸುವಂತೆ ಮಾಡಲಾಯಿತು.
ಗೇರುಪುರ ಬಸ್ ನಿಲ್ದಾಣವಂತು ರೋಗ ಹರಡುವ ಕಾರ್ಖಾನೆಯಂತಾಗಿತ್ತು. ಇಲ್ಲಿ ಬಂದು ಬಸ್ಸಿಗೆ ಕಾಯುವುದು ಜನರಿಗೆ ಹಿಂಸೆ ಅನಿಸುತ್ತಿತ್ತು. ಸುಬ್ರಹ್ಮಣ್ಯ ಎಂಬುವವರ ಹುಟ್ಟುಹಬ್ಬವನ್ನು ಇದೇ ಬಸ್ ನಿಲ್ದಾಣದಲ್ಲಿ ಆಚರಿಸಲು ಈ ಯುವಕರ ಗುಂಪು ನಿರ್ಧರಿಸಿತ್ತು. ಇಡೀ ದಿನ ಶ್ರಮದಾನ ಮಾಡಿ, ಬಸ್ ನಿಲ್ದಾಣಕ್ಕೆ ಹೊಸ ಲುಕ್ ನೀಡಲಾಯಿತು.
ಕಲ್ಲಹಳ್ಳ ಸೇತುವೆ. ವಾಹನ ಚಾಲಕರ ಪಾಲಿಗೆ ದುಸ್ವಪ್ನವಾಗಿತ್ತು. ರಾತ್ರಿ ವೇಳೆ ಲೈಟ್ ರಿಫ್ಲೆಕ್ಟ್ ಆಗದೆ ಸೇತುವೆ ಇರುವುದೆ ತಿಳಿಯದೆ ಅಪಘಾತ ಸಂಭವಿಸುತ್ತಿತ್ತು. ಕಲ್ಲಿದ್ದಲು ತುಂಬಿದ್ದ ಲಾರಿಯೊಂದು ಇತ್ತೀಚೆಗೆ ಇಲ್ಲಿ ಮಗುಚಿ ಬಿದಿತ್ತು. ಯುವಕರ ಗುಂಪಿನ ಪರಿಚಿತ ರವಿಕುಮಾರ್ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಈ ಸೇತವೆ ಮೇಲೆ ಆಚರಿಸುವ ಪ್ಲಾನ್ ಮಾಡಲಾಯಿತು. ಬೆಳಗ್ಗೆಯಿಂದ ನಿರಂತರ ಶ್ರಮದಾನ ಮಾಡಿ, ಸೇತುವೆಯನ್ನು ಕ್ಲೀನ್ ಮಾಡಲಾಯಿತು. ಅದರ ಮೇಲೆ ಬಿಳಿ ಬಣ್ಣ ಬಳಿದು, ವಾಹನ ಚಾಲಕರಿಗೆ ಅನುಕೂಲ ಮಾಡಿಕೊಡಲಾಯಿತು. ಮಂಜುನಾಥ ಶ್ರೇಷ್ಠಿ, ಕೀರ್ತನ್ ಕುಮಾರ್, ನಾಗರಾಜ ರಾಶಿ, ಪವನ್ ಹೊಸನಗರ, ಸಚಿನ್, ಶರತ್, ನಿಶ್ಚಿತ್ ಹೊಸನಗರ ಅವರು ಸೇತುವೆ ಕ್ಲೀನಿಂಗ್ ಟೀಂನಲ್ಲಿದ್ದರು.
ಕ್ಲೀನ್ ಮಾಡಿದ ಜಾಗದಲ್ಲೇ ಬರ್ತಡೆ
ಹುಟ್ಟುಹಬ್ಬದ ಪ್ರಯುಕ್ತ ನಿರ್ದಿಷ್ಟ ಸ್ಥಳದಲ್ಲಿ ಶ್ರಮದಾನ ಮಾಡಲಾಗುತ್ತದೆ. ಬಳಿಕ ಅದೇ ಜಾಗದಲ್ಲಿ ಕೇಕ್ ಕಟ್ ಮಾಡಲಾಗುತ್ತದೆ. ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ, ಪುನಃ ಆ ಸ್ಥಳವನ್ನು ಕ್ಲೀನ್ ಮಾಡಲಾಗುತ್ತದೆ.

ಯುವಕರ ಯೋಚನೆ ಬದಲಿಸಿದ ಫೇಸ್’ಬುಕ್
‘ನಮ್ಮ ಯೋಚನೆ ಬದಲಿಸಿದ್ದು ಹೊಸನಗರದ ಒಂದು ಫೇಸ್’ಬುಕ್ ಪೇಜ್’ನಲ್ಲಿ ಪ್ರಕಟವಾದ ಪೋಸ್ಟ್. ಆ ಬಳಿಕ ನಾವು ವಿಭಿನ್ನವಾಗಿ ಯೋಚಿಸಲು ಆರಂಭಿಸಿದೆವು’ ಅನ್ನುತ್ತಾರೆ ತಂಡದ ಸದಸ್ಯ ಮಂಜುನಾಥ ಶ್ರೇಷ್ಠಿ.

‘ಸ್ನೇಹಿತರೊಬ್ಬರ ಹುಟ್ಟುಹಬ್ಬವನ್ನು ಆಚರಿಸಲು ಕೇಕ್ ಕತ್ತರಿಸಿ, ಪಟಾಕಿ ಹೊಡೆದಿದ್ದೆವು. ಇದನ್ನು ಆ ಫೇಸ್’ಬುಕ್ ಪೇಜ್’ನಲ್ಲಿ ಫೋಟೊ ಸಹಿತ ಪ್ರಕಟಿಸಲಾಯಿತು. ಸ್ವಚ್ಛತೆ ಕಾಪಾಡುವ ಬದಲು ಹೀಗೆ ಹೊಸನಗರವನ್ನು ಹಾಳುಗೆಡವಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಆದರೆ ಆ ದಿನ ಪಟಾಕಿ ಹೊಡೆದ ಜಾಗವನ್ನು ನಾವು ಕ್ಲೀನ್ ಮಾಡಿದ್ದೆವು. ಅದನ್ನು ಮಾತ್ರ ಅವರು ಪ್ರಕಟಿಸಿರಲಿಲ್ಲ. ಇದರಿಂದ ಮುಜುಗರವಾಯಿತು. ಆದರೆ ಆಗಲೆ ನಮ್ಮಲ್ಲಿ ಹೊಸ ಯೋಚನೆ ಹುಟ್ಟಿತು’ ಅಂತಾರೆ ಮಂಜುನಾಥ ಶ್ರೇಷ್ಠಿ.

ಈ ಯುವಕರು ತಮ್ಮ ತಂಡಕ್ಕೆ ಹೆಸರಿಟ್ಟುಕೊಂಡಿಲ್ಲ. ಯಾರೊಬ್ಬರು ಅಧ್ಯಕ್ಷ, ಕಾರ್ಯದರ್ಶಿ ಎಂಬ ಜವಾಬ್ದಾರಿ ಹಂಚಿಕೊಂಡಿಲ್ಲ. ಪರಿಚಿತರ ಹುಟ್ಟುಹಬ್ಬವಿದ್ದಾಗ ಎಲ್ಲರು ಜೊತೆಗೂಡುತ್ತಾರೆ. ಮೊದಲೆ ನಿಗದಿ ಮಾಡಿಕೊಂಡಿರುವ ಸ್ಥಳವನ್ನು ಶ್ರಮದಾನದ ಮೂಲಕ ಕ್ಲೀನ್ ಮಾಡುತ್ತಾರೆ. ಯುವಕರ ಕಾರ್ಯಕ್ಕೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಟೀಕಾಕಾರರೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಕೆಲಸ ಮಾಡುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Sit , Manjunath avr contact number kodtiraa