ಶಿವಮೊಗ್ಗ ಲೈವ್.ಕಾಂ | 2 ಮೇ 2019
ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಕಳ್ಳತ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಿಪ್ಪನ್’ಪೇಟೆಯ ಉದ್ಯಮಿಯೊಬ್ಬರ ಮನೆಯಲ್ಲಿ ಇವರು ಕಳ್ಳತನ ಮಾಡಿದ್ದರು.
ಶಿವಮೊಗ್ಗದ ಸೀಗೆಹಟ್ಟಿಯ ಗಣೇಶ್ ಮತ್ತು ಹೊಳೆ ಬಸ್ ನಿಲ್ದಾಣ ಬಳಿಯ ಮಂಜುನಾಥ್ ಬಂಧಿತರು. ರಿಪ್ಪನ್’ಪೇಟೆಯ ಉದ್ಯಮಿ ಮಹಮದ್ ಫಾಜಿಲ್ ಅವರ ಮನೆಯ ಹಿಂಬಾಗಿಲನ್ನು ಒಡೆದು, ಕಳ್ಳತನ ಮಾಡಿದ್ದರು. ಉದ್ಯಮಿ ಫಾಜಿಲ್ ಅವರು ಕಾರ್ಯ ನಿಮಿತ್ತ ಕಾರವಾರಕ್ಕೆ ತೆರಳಿದ್ದರು. ಈ ವೇಳೆ ಘಟನೆ ನಡೆದಿತ್ತು.
ಶಿವಮೊಗ್ಗ ರಸ್ತೆಯ ಶಿವಮಂದಿರ ಬಳಿ, ಪೊಲೀಸರು ಕಂಡ ಆರೋಪಿಗಳು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅನುಮಾನಗೊಂಡು ಬೆನ್ನಟ್ಟಿ ಆರೋಪಿಗಳನ್ನು ಹಿಡಿದ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]