ನಾಡ ಕಚೇರಿಗೆ MLA ದಿಢೀರ್‌ ಭೇಟಿ, ಅಧಿಕಾರಿಗಳಿಗೆ ಫುಲ್‌ ಕ್ಲಾಸ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 25 AUGUST 2023

HOSANAGARA : ನಾಡಕಚೇರಿಗೆ ದಿಢೀರ್‌ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ (Araga Jnanendra), ಕರ್ತವ್ಯಕ್ಕೆ ತಡವಾಗಿ ಹಾಜರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಪ ತಹಶೀಲ್ದಾರ್‌ ಇಲ್ಲದಿರುವುದು ಕಂಡು ಗರಂ ಆದರು.

ಹೊಸನಗರದ ನಗರ ನಾಡ ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಹಠಾತ್‌ ಭೇಟಿ ನೀಡಿದರು. ಹಾಜರಾತಿ ಪುಸ್ತಕ ತರಿಸಿಕೊಂಡು ಪರಿಶೀಲನೆ ನಡೆಸಿದರು.

araga%20jnanendra

ಉಪ ತಹಶೀಲ್ದಾರ್‌ ಇರಲಿಲ್ಲ

ಶಾಸಕ ಆರಗ ಜ್ಞಾನೇಂದ್ರ ಭೇಟಿ ವೇಳೆ ಉಪ ತಹಶೀಲ್ದಾರ್‌ ಅವರು ನಾಡ ಕಚೇರಿಯಲ್ಲಿ ಇರಲಿಲ್ಲ. ತಕ್ಷಣ ತಾಲೂಕು ಕಚೇರಿಗೆ ಕರೆ ಮಾಡಿ ಉಪ ತಹಶೀಲ್ದಾರ್‌ ಕುರಿತು ಮಾಹಿತಿ ಕೇಳಿದರು. ಅವರು ಅಲ್ಲಿಯು ಇರಲಿಲ್ಲ. ಬಹು ಹೊತ್ತಿನ ಬಳಿಕ ಉಪ ತಹಶೀಲ್ದಾರ್‌ ಅವರು ಕಚೇರಿ ಆಗಮಿಸಿದರು. ಇದನ್ನು ಕಂಡು ಶಾಸಕ ಆರಗ ಜ್ಞಾನೇಂದ್ರ ಗರಂ ಆದರು. ನಿಗದಿತ ಸಮಯಕ್ಕೆ ಕಚೇರಿಗೆ ಅಗಮಿಸಬೇಕು ಎಂದು ತಾಕೀತು ಮಾಡಿದರು.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ನೊಟೀಸ್‌, ಯೋಜನೆ ಜಾರಿಗೆ ದಿನಾಂಕ ಫಿಕ್ಸ್‌

ಇವತ್ತಿಗೆ ಇವೆಲ್ಲ ಕೊನೆಯಾಗಬೇಕು

ಜನರು ಅಧಿಕಾರಿಗಳಿಗಾಗಿ ಕಾಯಬಾರದು. ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ ಜನರ ಕೆಲಸ ಮಾಡಬೇಕು. ಇನ್ನು, ಜನರ ಕೆಲಸಕ್ಕೆ ಹಣ ಪಡೆಯುತ್ತಿರುವ ಕುರಿತು ದೂರುಗಳು ಬರುತ್ತಿವೆ. ಇವೆಲ್ಲವು ಇವತ್ತಿಗೆ ಕೊನೆಯಾಗಬೇಕು ಎಂದು ಸೂಚನೆ ನೀಡಿದರು.

ನಗರ ಆಸ್ಪತ್ರೆಗು ಭೇಟಿ

ಇದೆ ವೇಳೆ ನಗರ ಆಸ್ಪತ್ರೆಗು ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಜೊತೆಗೆ ಕೆಲವು ಹೊತ್ತು ಚರ್ಚೆ ನಡಸಿ ಅಭಿಪ್ರಾಯ ಸಂಗ್ರಹಿಸಿದರು.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment