ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | STATION | 18 ಮೇ 2022
ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳತನ ಪ್ರಕರಣದ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ. ಶೌಚಕ್ಕೆ ತೆರಳುವುದಾಗಿ ತಿಳಿಸಿ ಆತ ಠಾಣೆಯಿಂದ (STATION) ಎಸ್ಕೇಪ್ ಆಗಿದ್ದಾನೆ.
ರಿಪ್ಪನ್ ಪೇಟೆ (RIPPONPETE) ಪೊಲೀಸ್ ಠಾಣೆಯಲ್ಲಿ ಘಟನೆ ಸಂಭವಿಸಿದೆ. ಚೆಂದಾಳದಿಂಬದ ಪ್ರತಾಪ್ ಎಂಬಾತ ಠಾಣೆಯಿಂದ ಪರಾರಿಯಾದಾತ.
ಏನಿದು ಘಟನೆ?
ಮೇ 13ರ ರಾತ್ರಿ ಸಾಗರ ರಸ್ತೆಯ ಭಗತ್ ಸಿಂಗ್ ಬಡಾವಣೆಯ ವೆಂಕಪ್ಪ ಶೆಟ್ಟಿ ಎಂಬುವವರ ಮನೆ ಶೆಡ್’ನಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳತನವಾಗಿತ್ತು. ಮಾಲೀಕ ಪವನ್ ಶೆಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶಿವಮೊಗ್ಗದ ಗ್ಯಾರೇಜ್ ಒಂದಕ್ಕೆ ಟ್ರೇಲರ್ ಮಾರಾಟವಾಗಿರುವ ಮಾಹಿತಿ ಲಭ್ಯವಾಗಿತ್ತು. ಮಾಲೀಕ ಪವನ್ ಶೆಟ್ಟಿ ಟ್ರೇಲರ್ ಗುರುತಿಸಿದ್ದರು.
ಮಸರೂರು ರಸ್ತೆಯ ಅರಣ್ಯ ಪ್ರದೇಶದಲ್ಲಿ ಟ್ರ್ಯಾಕ್ಟರ್ ಇಂಜಿನ್ ಪತ್ತೆಯಾಗಿತ್ತು. ಶಿವಮೊಗ್ಗದ ಗ್ಯಾರೇಜಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಚೆಂದಾಳದಿಂಬದ ಪ್ರತಾಪ್ ಇದರ ಸೂತ್ರಧಾರಿ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆಗೆ ಕರೆಸಲಾಗಿತ್ತು.
ರಾತ್ರಿ ಪೊಲೀಸ್ ಠಾಣೆಯಲ್ಲೇ ಮಲಗಿದ್ದ ಪ್ರತಾಪ್ ಬೆಳಗ್ಗೆ ಶೌಚಕ್ಕೆ ಹೋಗುವುದಾಗಿ ತಿಳಿಸಿ, ಪೊಲೀಸ್ ಸಿಬ್ಬಂದಿಯನ್ನು ತಳ್ಳಿಯಿಂದ ಠಾಣೆಯಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ –
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422