ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 4 ಮಾರ್ಚ್ 2020
ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜೋಶೋಧಾಬೆನ್ ಅವರು ಇವತ್ತು ಹೊಸನಗರದ ಶ್ರೀ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ್ದರು. ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಕೃಷ್ಣಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೋಶೋಧಾಬೆನ್ ಮೋದಿ ಅವರು ಮಠಕ್ಕೆ ಆಗಮಿಸಿದ್ದರು.
ಗೋವರ್ಧನಗಿರಿಯಲ್ಲಿ ಪೂಜೆ
ಶ್ರೀರಾಮಚಂದ್ರಾಪುರಕ್ಕೆ ಆಗಮಿಸುತ್ತಿದ್ದಂತೆ ಗೋವರ್ಧನ ಗಿರಿಗೆ ತೆರಳಿದ ಜೋಶೋಧಾಬೆನ್ ಮೋದಿ ಅವರು, ವಿಶೇಷ ಪೊಜೆ ಸಲ್ಲಿಸಿದರು. ಆ ಬಳಿಕ ಕಾರ್ಯಕ್ರಮದ ವೇದಿಕೆಗೆ ಆಗಮಿಸಿ, ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ರಾಘವೇಶ್ವರರಲ್ಲಿ ಆದಿ ಶಂಕರಾಚಾರ್ಯರನ್ನು ಕಂಡೆ
ಕಾರ್ಯಕ್ರಮದಲ್ಲಿ ಮಾತನಾಡಿದ ಜೋಶೋಧಾಬೆನ್ ಮೋದಿ ಅವರು, ಶ್ರೀರಾಘವೇಶ್ವರ ಸ್ವಾಮೀಜಿಯವರಲ್ಲಿ ನಾನು ಆದಿ ಶಂಕರಾಚಾರ್ಯರನ್ನು ಕಂಡೆ ಎಂದರು. ಶಂಕರಾಚಾರ್ಯರ ಕಾಲಿಗೆ ಮೊಸಳೆ ಕಚ್ಚಿದ ಕಥೆ ನೆನಪಿಸಿಕೊಂಡ ಅವರು, ಸಾಧುಸಂತರ ಬಗ್ಗೆ ಅಪಾರ ಗೌರವವಿರುವುದರಿಂದ ದೇಶದ ಉದ್ದಲಕ್ಕೆ ತೆರಳಿ ಸಾಧುಸಂತರ ಭೇಟಿ ಮಾಡುತ್ತಿದ್ದೇನೆ. ಭೇಟಿ ಪಡಾವೋ ಭೇಟಿ ಬಚಾವೋ ಕುರಿತು ಎಲ್ಲವರೂ ಹೆಚ್ಚು ಆಸಕ್ತಿ ವಹಿಸಬೇಕು ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422