ಕಾಡಿನಲ್ಲಿ ಅಂದರ್‌ ಬಾಹರ್‌, ಪೊಲೀಸರಿಂದ ರೇಡ್‌, 11 ಮಂದಿ ಅರಸ್ಟ್‌

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 21 MARCH 2024

HOSANAGARA : ಕಾಡಿನಲ್ಲಿ ಇಸ್ಪೀಟ್‌ ಅಂದರ್‌ ಬಾಹರ್‌ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ. 12,400 ರೂ. ನಗದು ವಶಕ್ಕೆ ಪಡೆದಿದ್ದಾರೆ. ಹೊಸನಗರ ತಾಲೂಕು ಅಳಗೇರಿ ಮಂಡ್ರಿ ಗ್ರಾಮದ ಕಾಡಿನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಕಾಡಿನಲ್ಲಿ ಜೂಜಾಟದ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ದಾಳಿ ನಡೆಸಲಾಗಿದೆ. ಡಿವೈಎಸ್‌ಪಿ ಗಜಾನನ ವಾಮನ ಸುತಾರ, ಇನ್ಸ್‌ಪೆಕ್ಟರ್‌ ಗುರಣ್ಣ ಹೆಬ್ಬಾರ್‌ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಗಿದೆ. ಪಿಎಸ್‌ಐ ರಾಜು ರೆಡ್ಡಿ ಬೆನ್ನೂರು ನೇತೃತ್ವದಲ್ಲಿ ಹೊಸನಗರ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 ಇದನ್ನೂ ಓದಿ ಪಲ್ಸರ್‌ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದರು, ಚಾಕು ತೋರಿಸಿ ಹಣ ದೋಚಿದರು

Leave a Comment