SHIVAMOGGA LIVE | 9 JULY 2023
HOSANAGARA : ಜಿಲ್ಲೆಯಾದ್ಯಂತ ಮಳೆ (Rain Decreases) ಪ್ರಮಾಣ ತಗ್ಗಿದೆ. ಅತಿ ಹೆಚ್ಚು ಮಳೆಯಾಗುತ್ತಿದ್ದ ಹೊಸನಗರ ತಾಲೂಕಿನಲ್ಲಿಯು ಮಳೆ ಕಡಿಮೆಯಾಗಿದೆ. ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ ಸೇರಿದಂತೆ ವಿವಿಧೆಡೆ ಗಣನೀಯ ಪ್ರಮಾಣದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಕಳೆದ 24 ಗಂಟೆಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 59 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೆ ದಿನ 136 ಮಿ.ಮೀ ಮಳೆಯಾಗಿತ್ತು. ಯಡೂರಿನಲ್ಲಿ 67 ಮಿ.ಮೀ ಮಳೆಯಾಗಿದೆ (ಕಳೆದ ವರ್ಷ 125 ಮಿ.ಮೀ), ಹುಲಿಕಲ್ನಲ್ಲಿ 73 ಮಿ.ಮೀ (ಕಳೆದ ವರ್ಷ 149 ಮಿ.ಮೀ), ಮಾಸ್ತಿಕಟ್ಟೆ 50 ಮಿ.ಮೀ (ಕಳೆದ ವರ್ಷ 126 ಮಿ.ಮೀ), ಚಕ್ರ 49 ಮಿ.ಮೀ (ಕಳೆದ ವರ್ಷ 68 ಮಿ.ಮೀ), ಸಾವೆಹಕ್ಲು 64 ಮಿ.ಮೀ (ಕಳೆದ ವರ್ಷ 89 ಮಿ.ಮೀ) ಮಳೆಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಒಳ ಹರಿವು ಇಳಿಕೆ
ಮಳೆ ಪ್ರಮಾಣ ಇಳಿಕೆ ಆಗಿರುವುದರಿಂದ ಜಲಾಶಯಗಳ ಒಳ ಹರಿವು ಕೂಡ ಕುಸಿತ ಕಂಡಿದೆ. ಮಾಣಿ ಜಲಾಶಯಕ್ಕೆ 3092 ಕ್ಯೂಸೆಕ್ ಒಳ ಹರಿವು ಇದೆ. ಪಿಕ್ಅಪ್ ಡ್ಯಾಂಗೆ 1318 ಕ್ಯೂಸೆಕ್, ಚಕ್ರ ಡ್ಯಾಂಗೆ 1134 ಕ್ಯೂಸೆಕ್, ಸಾವೆಹಕ್ಲು 852 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.
ಇದನ್ನೂ ಓದಿ – ಶಾಲೆಗಳಿಗೆ ರಜೆ ವಿಚಾರ, ವೈರಲ್ ಆಯ್ತು ತಪ್ಪು ಸಂದೇಶ, ವಾಸ್ತವದಲ್ಲಿ ಶಿಕ್ಷಣ ಇಲಾಖೆ ಘೋಷಿಸಿದ್ದೇನು?
ಹೊಸನಗರದಲ್ಲಿ ಮಳೆ ಇಳಿಕೆ
ಹೊಸನಗರ ತಾಲೂಕಿನಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಮಳೆಯಾಗುತ್ತದೆ. ಈ ಬಾರಿ ನಗರ ಹೋಬಳಿಯಲ್ಲಿ ಭಾರಿ ಮಳೆಯಾಗಿತ್ತು. ನಿಟ್ಟೂರು, ಸಂಪೆಕಟ್ಟೆ, ನಗರ ಸೇರಿದಂತೆ ವಿವಿಧೆಡೆ ಮಳೆ ಅಬ್ಬರಿಸಿತ್ತು. ಆದರೆ ದಿಢೀರನೆ ಪ್ರಮಾಣ ಕಡಿಮೆಯಾಗಿದೆ (Rain Decreases).