ಶಿವಮೊಗ್ಗ ಲೈವ್.ಕಾಂ | HOSANAGARA NEWS | 13 ಸೆಪ್ಟೆಂಬರ್ 2021
ಹೊಸನಗರ ತಾಲೂಕಿನಲ್ಲಿ ಈ ತಿಂಗಳು ವಾಡಿಕೆಗಿಂತಲೂ ಐದು ಪಟ್ಟು ಹೆಚ್ಚು ಮಳೆಯಾಗಿದೆ. ಅದರಲ್ಲೂ ಕಳೆದ ಆರು ದಿನದಲ್ಲಿ ಅತ್ಯಧಿಕ ಮಳೆ ಸುರಿದಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಹೊಸನಗರ ತಾಲೂಕಿನಲ್ಲಿ 219 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಭಾರಿ 1150.20 ಮಿ.ಮೀ ಮಳೆಯಾಗಿದೆ.
ಕಳೆದ ಆರು ದಿನದಲ್ಲಿ ಹೊಸನಗರ ತಾಲೂಕಿನಲ್ಲಿ 875.4 ಮಿ.ಮೀ ಮಳೆಯಾಗಿದೆ. ಸೆಪ್ಟೆಂಬರ್ 8ರಿಂದ ವರುಣ ಅಬ್ಬರಿಸಲು ಆರಂಭಿಸಿದ್ದಾನೆ. ಆ ದಿನ ತಾಲೂಕಿನಲ್ಲಿ 168.40 ಮಿ.ಮೀ ಮಳೆಯಾಗಿದೆ. ಸೆ.9ರಂದು 129.20 ಮಿ.ಮೀ, ಸೆ.10ರಂದು 118.80 ಮಿ.ಮೀ, ಸೆ.11ರಂದು 98.40 ಮಿ.ಮೀ, ಸೆ.12ರಂದು 182 ಮಿ.ಮೀ, ಸೆ.13ರ ವರದಿ ಪ್ರಕಾರ 178.60 ಮಿ.ಮೀ ಮಳೆಯಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200