SHIVAMOGGA LIVE | 8 JULY 2023
HOSANAGARA : ತಾಲೂಕಿನ ಚಕ್ರ, ಮಾಣಿ, ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ (Rain). ಒಂದೇ ದಿನ 90 ಮಿ.ಮೀ.ಗಿಂತಲೂ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿರುವ ಜಲಾಶಯಗಳಿಗೆ ನೀರಿನ ಒಳ ಹರಿವು ಏರಿಕೆಯಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಕಳೆದ 24 ಗಂಟೆ ಅವಧಿಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 92 ಮಿ.ಮೀ, ಯಡೂರು ವ್ಯಾಪ್ತಿಯಲ್ಲಿ 86 ಮಿ.ಮೀ, ಹುಲಿಕಲ್ ವ್ಯಾಪ್ತಿಯಲ್ಲಿ 81 ಮಿ.ಮೀ, ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ 90 ಮಿ.ಮೀ, ಚಕ್ರ ವ್ಯಾಪ್ತಿಯಲ್ಲಿ 98 ಮಿ.ಮೀ, ಸಾವೆಹಕ್ಲುವಿನಲ್ಲಿ 80 ಮಿ.ಮೀ ಮಳೆಯಾಗಿದೆ.
ಡ್ಯಾಂಗಳಿಗೆ ಒಳ ಹರಿವು ಹೆಚ್ಚಳ
ಮಳೆ (Rain) ಹೆಚ್ಚಳದಿಂದಾಗಿ ಮಾಣಿ, ಪಿಕ್‌ಅಪ್, ಚಕ್ರ ಮತು ಸಾವೆಹಕ್ಲು ಡ್ಯಾಂಗಳಿಗೆ ಒಳ ಹರಿವು ಏರಿಕೆಯಾಗಿದೆ.
ಮಾಣಿ ಜಲಾಶಯಕ್ಕೆ 2725 ಕ್ಯೂಸೆಕ್ ಒಳ ಹರಿವು ಇದೆ. ನೀರಿನ ಮಟ್ಟ 572.24 ಎಂಎಸ್‌ಎಲ್‌ಗೆ ತಲುಪಿದೆ. ಕಳೆದ ವರ್ಷ ಈ ದಿನ ನೀರಿನ ಮಟ್ಟ 576.24 ಎಂಎಸ್‌ಎಲ್ ಇತ್ತು.
ಪಿಕ್‌ಅಪ್ ಡ್ಯಾಂಗೆ 543 ಕ್ಯೂಸೆಕ್ ಒಳ ಹರಿವು ಇದೆ. ಪ್ರಸ್ತುತ ನೀರಿನ ಮಟ್ಟ 562.10 ಎಂಎಸ್‌ಎಲ್ ಇದೆ. 969 ಕ್ಯೂಸೆಕ್ ಹೊರ ಹರಿವು ಇದೆ.
ಇದನ್ನೂ ಓದಿ – ಶಾಲೆಗಳಿಗೆ ರಜೆ ವಿಚಾರ, ವೈರಲ್ ಆಯ್ತು ತಪ್ಪು ಸಂದೇಶ, ವಾಸ್ತವದಲ್ಲಿ ಶಿಕ್ಷಣ ಇಲಾಖೆ ಘೋಷಿಸಿದ್ದೇನು?
ಚಕ್ರ ಜಲಾಶಯ 1157 ಕ್ಯೂಸೆಕ್ ಒಳ ಹರಿವು ಇದೆ. ಇವತ್ತು ನೀರಿನ ಮಟ್ಟ 566.66 ಎಂಎಸ್‌ಎಲ್ ಇದೆ. ಕಳೆದ ವರ್ಷ ಈ ದಿನ ನೀರಿನ ಮಟ್ಟ 574.62 ಎಂಎಸ್‌ಎಲ್ ಇತ್ತು.
ಸಾವೆಹಕ್ಲು ಡ್ಯಾಂಗೆ 1368 ಕ್ಯೂಸೆಕ್ ಒಳ ಹರಿವು ಇದ್ದು, ನೀರಿನ ಮಟ್ಟ 574.30 ಎಂಎಸ್‌ಎಲ್ ಇದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200