ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RIPPONPETE NEWS, 15 NOVEMBER 2024 : ಆಚಾರ್ಯ ಶಾಂತಿಸಾಗರ ಮುನಿ ಮಹಾರಾಜರ ಪದಾರೋಹಣ ಶತಮಾನೋತ್ಸವದ ಸ್ಮರಣಾರ್ಥ, ಹೊಂಬುಜ ಜೈನಮಠದಲ್ಲಿ ಇಂದ್ರಧ್ವಜ ಮಹಾಮಂಡಲ ಧಾರ್ಮಿಕ ಕೈಂಕರ್ಯ ನಡೆಯಿತು. ಅಂಚೆ ಇಲಾಖೆಯ ವತಿಯಿಂದ ಶಾಂತಿಸಾಗರ ಮುನಿವರ್ಯರ ಭಾವಚಿತ್ರದ ಅಂಚೆ ಚೀಟಿ ಪ್ರಕಟಿಸಲಾಗಿದ್ದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಂಚೆ ಚೀಟಿ (Stamp) ಲೋಕಾರ್ಪಣೆಗೊಳಿಸಿದರು.
ವಿಶ್ವದಲ್ಲಿ ಮಾನವತಾ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸಿ, ಮನನ ಮಾಡುವಂತೆ ಮಾಡಿದ ಜೈನ ಧರ್ಮದ ಪ್ರಸಾರಕ ಶಾಂತಿಸಾಗರ ಮುನಿಮಹಾರಾಜರ ಜೀವನ ಕ್ರಮ ಸರ್ವಕಾಲಕ್ಕೂ ಪ್ರಸ್ತುತ. ಇಂದ್ರಧ್ವಜ ಮಹಾಮಂಡಲ ಕಾರ್ಯಕ್ರಮದ ಪ್ರಥಮ ದಿನ ಮುನಿಶ್ರೀಗಳ ಅಂಚೆ ಚೀಟಿ ಬಿಡುಗಡೆ ಕಂಡಿರುವುದು ಐತಿಹಾಸಿಕ ದಾಖಲೆ. ಇಂದ್ರಧ್ವಜ ಆರಾಧನಾ ವಿಧಾನವು ಜೈನ ಧರ್ಮದ ಆರಾಧನೆಯಲ್ಲಿಯೇ ಶ್ರೇಷ್ಠ ಪ್ರಕ್ರಿಯೆ.
ಡಾ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮದರ್ಶಿ
25 ಸಂವತ್ಸರಗಳನ್ನು ಜನಾನುರಾಗಿಯಾಗಿ ಪೂರ್ಣಗೊಳಿಸಿದ ಅರಹಂತಗಿರಿ ಮಠದ ಪೀಠಾಧೀಶ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ‘ಜೈನಾಗಮಭೂಷಣ’ ಎಂಬ ಗೌರವ ನೀಡಿ ಮಠದ ವತಿಯಿಂದ ಸನ್ಮಾನಿಸಲಾಯಿತು.
ಹೊಂಬುಜ ಜೈನ ಕಂಬದಹಳ್ಳಿ, ಸೋಂದಾ, ಸಿಂಹನಗದ್ದೆ ಭಟ್ಟಾರಕ ಸ್ವಾಮೀಜಿ ಹಾಗೂ ಜೈನ ಸಮಾಜದ ಮುಖಂಡರಾದ ಅನಿಲ ಸೇಠಿ, ರಾಕೇಶ ಸೇಠಿ, ರಾಜೇಂದ್ರ ಬಿಳಗಿ, ಮಹೇಂದ್ರ ಶಿಂಘಿ, ಅಶೋಕ ಸೇಠಿ, ಸಂದೇಶ ಮಹದೇವ್, ಆರ್.ಟಿ. ತವನಪ್ಪನವರು, ವಡನಬೈಲ್ ಧರ್ಮದರ್ಶಿ ವೀರರಾಜಯ್ಯ, ಅಂಚೆ ಇಲಾಖೆಯ ಅಧಿಕಾರಿ ಎಸ್. ರಾಜೇಂದ್ರ ಕುಮಾರ್, ಮಹಾವೀರ ಕುಂದೂರು ಭಾಗವಹಿಸಿದ್ದರು.
ನ.20ರವರೆಗೆ ಧಾರ್ಮಿಕ ಕಾರ್ಯಕ್ರಮ
ಇಂದ್ರಧ್ವಜ ಮಹಾಮಂಡಲ ವಿಧಾನದ ಅಂಗವಾಗಿ ನ.20ರವರೆಗೆ ಹೊಂಬುಜದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಪ್ರತಿದಿನ ಸುಪ್ರಭಾತ, ಅಭಿಷೇಕ, ಧಾರ್ಮಿಕ ಸಭೆ, ಸಂಜೆ ಆರತಿ, ಜಾಪ್ಯಾನುಷ್ಠಾನ ನಡೆಯಲಿದೆ. ನ.20ರಂದು ರಥೋತ್ಸವ ಮತ್ತು ಲಕ್ಷ ದೀಪೋತ್ಸವ ನಡೆಯಲಿದೆ.
ಇದನ್ನೂ ಓದಿ » ಶಿವಮೊಗ್ಗ ತಹಶೀಲ್ದಾರ್ ವರ್ಗಾವಣೆ, ಅನುಮಾನ ಮೂಡಿಸಿದ ನಡೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422