SHIVAMOGGA LIVE NEWS, 25 DECEMBER 2024
ಹೊಸನಗರ : ಕೊಡಚಾದ್ರಿ (Kodachadri) ಸಮೀಪ ಜೀಪ್ ಮತ್ತು ಟೆಂಪೊ ಟ್ರಾವಲರ್ ಡಿಕ್ಕಿಯಾಗಿದ್ದು 8 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೊಸನಗರ ತಾಲೂಕು ನಿಟ್ಟೂರು ಸಮೀಪದ ಮರಕುಟಿಗ ಬಳಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಕೊಲ್ಲೂರಿನಿಂದ ಕೊಡಚಾದ್ರಿಗೆ ತೆರಳುತ್ತಿದ್ದ ಜೀಪ್, ಶಿವಮೊಗ್ಗ ಕಡೆಯಿಂದ ತೆರಳುತ್ತಿದ್ದ ಟಿ.ಟಿ. ವಾಹನ ಮುಖಾಮುಖಿ ಡಿಕ್ಕಿಯಾಗಿವೆ.
ಇದನ್ನೂ ಓದಿ » ಸಿಗಂದೂರು ಸೇತುವೆ, ಡ್ರೋಣ್ ವಿಡಿಯೋ ರಿಲೀಸ್, ನೋಡಲು ಇಲ್ಲಿ ಕ್ಲಿಕ್ ಮಾಡಿ
ಜೀಪ್‌ನಲ್ಲಿದ್ದ 8 ಮಂದಿ ಪೈಕಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಇವರೆಲ್ಲ ಕೇರಳದಿಂದ ಬಂದಿದ್ದ ಪ್ರವಾಸಿಗರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ರವಾನಿಸಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ » ವಿಷ ಸೇವಿಸಿದ್ದ ಪದವಿ ವಿದ್ಯಾರ್ಥಿನಿ ಕೊನೆಯುಸಿರು