SHIVAMOGGA LIVE NEWS, 3 DECEMBER 2024
ರಿಪ್ಪನ್ಪೇಟೆ : ಯಾರೂ ಇಲ್ಲದ ವೇಳೆ ಕಳ್ಳರು ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳ್ಳತನ (Theft) ಮಾಡಲಾಗಿದೆ. ಈ ಸಂಬಂಧ ರಿಪ್ಪನ್ಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಪ್ರಕರಣ 1
ಗ್ರಾಮ : ತಂಗಳವಾಡಿ, ಅರಸಾಳು
ಇಲ್ಲಿನ ಶ್ರೀನಥ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಶ್ರೀನಾಥ್ ಅವರ ತಾಯಿ ಹೊಸನಗರದ ಧರ್ಮಸ್ಥಳಕ್ಕೆ ಸಂಘಕ್ಕೆ ಹೋಗಿ ಹಿಂತಿರುಗಿದಾಗ ಮನೆ ಬಾಗಿಲಿನ ಲಾಕ್ ಮುರಿದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ 36 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣ 2
ಗ್ರಾಮ : ಕಗ್ಗಲಿ, ತಳಲೆ
ಅಶೋಕ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅಶೋಕ್ ರಿಪ್ಪನ್ಪೇಟೆಯಲ್ಲಿ ಗಾರೆ ಕೆಲಸಕ್ಕೆ ತೆರಳಿದ್ದರು. ಅವರ ಪತ್ನಿ ಗದ್ದೆ ಕೊಯ್ಲಿಗೆ ಹೋಗಿದ್ದರು. ಮನೆಗೆ ಹಿಂತಿರುಗಿದಾಗ ಬಾಗಿಲಿನ ಲಾಕ್ ಮುರಿದು 95,900 ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
ಇದನ್ನೂ ಓದಿ » ಹೊಳೆಹೊನ್ನೂರು ಬಳಿ ಎರಡು ಕಾರು, ಬೈಕ್ ಅಪಘಾತ