ರಿಪ್ಪನ್‌ಪೇಟೆ: ದಕ್ಷಿಣದ ಕಾಶಿ ಎಂದೇ ಪ್ರಸಿದ್ಧವಾದ ಸಮೀಪದ ಹೊಂಬುಜ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಕಳೆದ ಆರು ದಿನಗಳಿಂದ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ವಾರ್ಷಿಕ ಮಹಾ ರಥೋತ್ಸವಕ್ಕೆ ಧ್ವಜಾರೋಹಣ ಮತ್ತು ಕುಂಕುಮೋತ್ಸವದ (kumkumotsava) ಓಕಳಿಯೊಂದಿಗೆ ಸಾಂಗವಾಗಿ ತೆರೆ ಬಿದ್ದಿತು.
ಹೊಂಬುಜ ಜೈನ ಮಠದ ಪೀಠಾಧಿಕಾರಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ ಆರು ದಿನಗಳ ಕಾಲ ವಿವಿಧ ಧಾರ್ಮಿಕ ಆರಾಧನೆಗಳು ಜರುಗಿದವು. ಉತ್ಸವದ ಅಂಗವಾಗಿ ನಾಗವಾಹನೋತ್ಸವ, ಸಿಂಹವಾಹನೋತ್ಸವ, ಬೆಳ್ಳಿ ರಥೋತ್ಸವ ಹಾಗೂ ಪುಷ್ಪರಥೋತ್ಸವಗಳು ನಡೆದವು. ಪ್ರಧಾನ ಪುರೋಹಿತ ಪದ್ಮರಾಜ ಇಂದ್ರ ಮತ್ತು ಸಹ ಪುರೋಹಿತರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.

ಶೋಭಾಯಾತ್ರೆ ಮತ್ತು ಓಕಳಿ
ನಗರದ ರಾಜಬೀದಿಗಳಲ್ಲಿ ಅಲಂಕೃತ ಪಲ್ಲಕ್ಕಿಯಲ್ಲಿ ಅವಕೃತ ಜಿನಬಿಂಬಗಳನ್ನು ಜಿನಸ್ತುತಿಯೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಕುಮದ್ವತಿ ತೀರ್ಥದಿಂದ ಅನ್ನೋದಕವನ್ನು ತಂದು ದೇವಿಗೆ ಅರ್ಪಿಸಲಾಯಿತು. ಅಂತಿಮ ದಿನ ನಡೆದ ಕುಂಕುಮೋತ್ಸವದಲ್ಲಿ ಪದ್ಮಾವತಿ ಮಹಿಳಾ ಮಂಡಳದ ಸದಸ್ಯರು ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಓಕಳಿಯಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ – ₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?
ರಥೋತ್ಸವದ ಯಶಸ್ಸಿಗೆ ಸಹಕರಿಸಿದ ಪೊಲೀಸ್ ಇಲಾಖೆ, ಮೆಸ್ಕಾಂ, ಪಂಚಾಯಿತಿ, ಕಂದಾಯ ಮತ್ತು ಆರೋಗ್ಯ ಇಲಾಖೆ, ಗೃಹರಕ್ಷಕ ದಳ ಹಾಗೂ ಸ್ವಯಂಸೇವಕರಿಗೆ ಮಠದ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ನೇ. ಮಗದುಮ್ಮ ಹಾಗೂ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ ಕೃತಜ್ಞತೆ ಸಲ್ಲಿಸಿದರು.


About The Editor
ನಿತಿನ್ ಆರ್.ಕೈದೊಟ್ಲು






