SHIVAMOGGA LIVE NEWS | 7 ಮಾರ್ಚ್ 2022
ಬಿಎಸ್ಎನ್ಎಲ್ ಅಸಮರ್ಪಕ ಸಂಪರ್ಕದ ವಿರುದ್ಧ ಹೊಸನಗರ ತಾಲೂಕು ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತಿಮನೆ ದೂರವಾಣಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಒಂದು ವಾರದ ಗಡುವು ಕೂಡ ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವೇನು?
♦ ಮತ್ತಿಮನೆ ಕೇಂದ್ರದ ವ್ಯಾಪ್ತಿಯಲ್ಲಿ ಮತ್ತಿಮನೆ, ಸಮಗೋಡು, ಅರಮನೆಕೊಪ್ಪ, ಕಿರುಗುಳಿಗೆ, ಹಲಸಿನಕಟ್ಟೆ, ಓತನಾಡಿ, ತರುವೆ, ಕುಂದಗಲ್ಲು ಸೇರಿದಂತೆ ಹಲವು ಗ್ರಾಮಗಳು ಬರಲಿವೆ. ಇಲ್ಲಿ 250ಕ್ಕೂ ಹೆಚ್ಚು ಸ್ಥಿರ ದೂರವಾಣಿ ಸಂಪರ್ಕವಿದೆ.
♦ ಕಳೆದ ಎರಡು ವರ್ಷದಿಂದ ಬಿಎಸ್ಎನ್ಎಲ್ ಸಂಪರ್ಕ ಸಂಪೂರ್ಣ ಹದಗೆಟ್ಟಿದೆ. FTTH ಫೈಬರ್ ಕೇಬಲ್ ಸಂಪರ್ಕ ಪಡೆಯುವಂತೆ ಅಧಿಕಾರಿಗಳು ತಿಳಿಸಿದರು. ಅದರಂತೆ ಸಂಪರ್ಕ ಪಡೆಯಲಾಗಿದೆ. ಆದರೂ ದೂರವಾಣಿ ವ್ಯವಸ್ಥೆ ಸರಿಯಾಗಿಲ್ಲ.
♦ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಲಾಗಿದೆ. ಪ್ರಧಾನ ಮಂತ್ರಿ ಅವರಿಗೂ ಪತ್ರ ಬರೆಯಲಾಗಿದೆ. ಆದರೂ ಸಮರ್ಪಕ ಸೇವೆ ಒದಗಿಸಲು ಆಗಿಲ್ಲ. ಇನ್ನೊಂದು ವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ತೀವ್ರಗೊಳಿಸಲಾಗುತ್ತದೆ.
ಪ್ರತಿಭಟನೆಯಲ್ಲಿ ಡಿ.ಕೆ.ಚಂದ್ರಶೇಖರ್, ಎಸ್.ಶ್ರೀನಿವಾಸ್, ಹೆಚ್.ಆರ್.ಆದಿತ್ಯ, ಕೆ.ಟಿ.ಗುರುರಾಜ್, ಗಂಗಾಧರ ಕರಬ, ರಮೇಶ್, ಮುರುಳಿ, ನಾಗರಾಜ್, ಆದರ್ಶ, ಭೀಮೇಶ್, ಶ್ರೀನಿವಾಸ ಶೆಟ್ಟಿ, ವಿಷ್ಣು ಭಟ್, ದೀಪಕ್ ನಾಗರಾಜ್, ಚಂದ್ರಶೇಖರ್, ವೀಣಾ ಶ್ರೀನಿವಾಸ್ ಸೇರಿ ಹಲವರು ಇದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200