ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 1 AUGUST 2023
HOSANAGARA : ಯುವಕರ (Youths) ಗುಂಪೊಂದು ನಡುರಾತ್ರಿ ಉಪನ್ಯಾಸಕರೊಬ್ಬರ ಮನೆಗೆ ನುಗ್ಗಲು ಯತ್ನಿಸಿದೆ. ಬಾಗಿಲು ಒಡೆದು ಒಳ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದೆ ಎಂದು ಆರೋಪಿಸಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಹೊಸನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಉಪನ್ಯಾಸಕ ಅಂಜನ್ ಕುಮಾರ್ ಮನೆ ಮೇಲೆ 10 ರಿಂದ 15 ಯುವಕರು ದಾಳಿ ನಡೆಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಏನಿದು ಪ್ರಕರಣ?
ಜು.29ರ ರಾತ್ರಿ 12 ಗಂಟೆ ಹೊತ್ತಿಗೆ ಉಪನ್ಯಾಸಕ ಅಂಜನ್ ಕುಮಾರ್ ಮನೆ ಕಾಂಪೌಂಡ್ ಒಳಗೆ ಯುವಕರ ಗುಂಪು ಅತಿಕ್ರಮ ಪ್ರವೇಶ ಮಾಡಿದೆ. ಮನೆಯೊಳಗೆ ಮುಸ್ಲಿಂ ಯುವತಿಯನ್ನು ಇರಿಸಿಕೊಂಡಿದ್ದೀಯ ಬಾಗಿಲು ತೆಗಿ ನಾವು ನೋಡಬೇಕು ಎಂದು ಉಪನ್ಯಾಸಕನಿಗೆ ಒತ್ತಾಯಿಸಿದ್ದಾರೆ. ಉಪನ್ಯಾಸಕ ನಿರಾಕರಿಸಿದಾಗ, ಬಾಗಿಲು ಒಡೆದು ಒಳಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಯುವಕರ ಗುಂಪು ಬೆದರಿಕೆ ಒಡ್ಡಿದೆ ಎಂದು ಉಪನ್ಯಾಸಕ ದೂರಿನಲ್ಲಿ ಆರೋಪಿಸಿದ್ದಾರೆ.
ಮಾಲೀಕ, ಪೊಲೀಸರಿಂದ ಪರಿಶೀಲನೆ
ಯುವಕರ (Youths) ಗುಂಪು ದಾಳಿ ನಡೆಸಿರುವ ವಿಚಾರ ತಿಳಿಯುತ್ತಿದ್ದಂತೆ ಮನೆ ಮಾಲೀಕ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಯುವಕರ ಆರೋಪದ ಹಿನ್ನೆಲೆ ಉಪನ್ಯಾಸಕ ಅಂಜನ್ ಕುಮಾರ್ ಅವರ ಮನೆಯ ಪರಿಶೀಲನೆ ನಡೆಸಿದರು. ಮನೆಯಲ್ಲಿ ಯಾರು ಇರಲಿಲ್ಲ. ಈ ಹಿನ್ನೆಲೆ ಯುವಕರಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ. ಈ ವೇಳೆ ಯುವಕರು ಪುನಃ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಉಪನ್ಯಾಸನ ದೂರಿನಲ್ಲಿ ಆಪಾದಿಸಿದ್ದಾರೆ.
ಹೊಸನಗರ ಠಾಣೆಯಲ್ಲಿ ಮಂಜುನಾಥ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.