ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA NEWS, 27 AUGUST 2024 : ಕೊಳೆ ರೋಗದಿಂದ ಅಡಿಕೆ (Adike) ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಕೂಡಲೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಅಡಿಕೆ ಸುರಿದು ಪ್ರತಿಭಟನೆ ನಡೆಸಲು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ತೀರ್ಮಾನಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ಟ, ಸೆ.29ರಂದು ಬೆಳಗ್ಗೆ ಅಡಿಕೆ ಸುರಿದು ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಅಧ್ಯಕ್ಷರು ಹೇಳಿದ್ದೇನು? ಇಲ್ಲಿದೆ 3 ಪಾಯಿಂಟ್
ಭಾರಿ ಮಳೆಗೆ ಅತಿವೃಷ್ಟಿ ಉಂಟಾಗಿದೆ. ಸಾಗರ, ಹೊಸನಗರ, ಸೊರಬ ವ್ಯಾಪ್ತಿಯಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ಶೇ.60ರಷ್ಟು ಅಡಿಕೆ ನಾಶವಾಗಿದೆ. ಅನೇಕ ಬಾರಿ ಔಷಧ ಸಿಂಪಡಣೆ ಮಾಡಿದರು ಪ್ರಯೋಜನವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಶೇ.100ರಷ್ಟು ಬೆಳೆ ನಷ್ಟವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಗೋಡು ತಿಮ್ಮಪ್ಪ ಅವರು ವಿಧಾನಸಭೆ ಅಧ್ಯಕ್ಷರಾಗಿದ್ದಾಗ ಅಡಿಕೆ ಕೊಳೆರೋಗಕ್ಕೆ ಮೊದಲ ಬರಿ ಪರಿಹಾರ ಸಿಗುವಂತಾಗಿತ್ತು. ಈಗ ತೀವ್ರ ಮಳೆಗೆ ವಿವಿಧೆಡೆ ಅಡಿಕೆ ಹಾನಿಯಾಗಿದ್ದು, ಕರೂರು, ಭಾರಂಗಿ ಭಾಗಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಮೊದಲ ಬಾರಿ ಪರಿಹಾರ ಕೊಟ್ಟಿದ್ದ ಸಿದ್ದರಾಮ್ಯಯ ಅವರೆ ಈಗ ಮುಖ್ಯಮಂತ್ರಿಯಾಗಿದ್ದಾರೆ. ಇದರಿಂದ ಆಶಾಭಾವನೆ ಮೂಡಿದೆ ಎಂದರು.
ಕಾಡು ಪ್ರಾಣಿಗಳಿಂದ ಅಡಿಕೆ ನಾಶವಾಗುತ್ತಿದೆ. ಇದಕ್ಕೆ ಪರಿಹಾರ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಇನ್ನು, ತಾಲೂಕು ಮತ್ತು ಸುತ್ತಮುತ್ತಲು ಅಡಿಕೆ ಕಳ್ಳತನ ಪುನಃ ಶುರುವಾಗಿದೆ. ಪೊಲೀಸ್ ಇಲಾಖೆ ಕಳ್ಳರನ್ನು ಹಿಡಿಯಲು ಕಾರ್ಯಾಚರಣೆ ನಡೆಸಬೇಕು. ಮತ್ತೊಂದೆಡೆ ಅಡಿಕೆಗೆ ಬಣ್ಣ ಮಿಶ್ರಣ ಮಾಡುವುದನ್ನು ಸಂಘ ಸಹಿಸುವುದಿಲ್ಲ ಎಂದರು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು, ಪ್ರಮುಖರಾದ ರಾಜೇಂದರ ಖಂಡಿಕಾ, ನಾಗಾನಂದ, ಅವಿನಾಶ್, ವೆಂಕಟಗಿರಿ ಕುಗ್ವೆ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ ⇒ ಫೋಟೋದಲ್ಲಿ ಪೋಸ್ ಕೊಟ್ಟು, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ ಯುವಕನಿಗೆ ಸಂಕಷ್ಟ, ಕೇಸ್ ದಾಖಲು