ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 JANUARY 2024
ಸಾಗರ : ಕಾರ್ಗಲ್‌ನ ಜೋಗ ರಸ್ತೆಯ ಮಹಾವೀರ ಸರ್ಕಲ್ ಮತ್ತು ಶ್ರೀಪುರ ಮದ್ಯದ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಕರಿ ಚಿರತೆ (Black Panther) ಕಾಣಿಸಿಕೊಂಡಿದೆ. ಅರಣ್ಯದೊಳಕ್ಕೆ ಹೋಗಲು ಶ್ವಾನವನ್ನು ಕಚ್ಚಿಕೊಂಡ ಕರಿ ಚಿರತೆ ರಸ್ತೆ ಮಧ್ಯಕ್ಕೆ ಜಿಗಿದಿದೆ.
ವಾಕಿಂಗ್ ತೆರಳುತ್ತಿದ್ದ ಪಟ್ಟಣದ ಉದ್ಯಮಿ ಶಿವಪ್ರಸಾದ್ ಅವರಿಗೆ ಕರಿ ಚಿರತೆ ಕಾಣಿಸಿಕೊಂಡಿದೆ. ಕೂಡಲೆ ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ‘ಸಾರ್ವಜನಿಕರು ಈ ಸ್ಥಳದಲ್ಲಿ ಜಾಗರೂಕರಾಗಿ ಸಂಚರಿಸುವಂತೆ’ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರ ಎಂ.ಕೆ.ಸುರೇಶ್ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ ಚಿರತೆ ಸೆರೆಹಿಡಿಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ » ಸ್ನೇಹಿತರ ಮಧ್ಯೆ ಜಗಳ, ಬಿಡಸಲು ಹೋದ ಸಂಬಂಧಿಗೆ ರೇಜರ್‌ನಿಂದ ಇರಿತ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422