
ಶಿವಮೊಗ್ಗ ಲೈವ್.ಕಾಂ | SAGARA | 1 ಮೇ 2020
ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆ ಯುವಕನೊಬ್ಬನ ವಿರುದ್ಧ ಸಾಗರದಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಇಲ್ಲಿನ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ವೈದ್ಯರನ್ನು ನಿಂದಿಸಿದ್ಯಾರು? ಘಟನೆಗೇನು ಕಾರಣ?
ಸಾಗರ ಪಟ್ಟಣದ ಸಮೀರ್ ಎಂಬಾತ ತನ್ನ ಸಹೋದರನನ್ನು ಆಸ್ಪತ್ರೆಗೆ ಕರೆತಂದಿದ್ದ. ಸಹೋದರನ ಕಾಲಿಗೆ ಗಾಯವಾಗಿದ್ದು, ತುರ್ತು ಚಿಕಿತ್ಸೆ ನೀಡಬೇಕು ಎಂದು ಸಮೀರ್ ವೈದ್ಯರನ್ನು ಒತ್ತಾಯಿಸಿದ. ಈ ವೇಳೆ ಕೀಲು ಮತ್ತು ಮೂಳೆ ತಜ್ಞ ಡಾ.ಪರಪ್ಪ ಅವರು ಕರೋನ ತಪಾಸಣೆಯಲ್ಲಿ ನಿರತವಾಗಿದ್ದರು. ಹಾಗಾಗಿ ಸರದಿಯಲ್ಲಿ ಬರುವಂತೆ ಸಮೀರ್‌ಗೆ ಸೂಚಿಸಿದರು.
ಇದರಿಂದ ಆಕ್ರೋಶಗೊಂಡ ಸಮೀರ್ ವೈದ್ಯರನ್ನು ನಿಂದಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸಾಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಯಲ್ಲಿ ಸಮೀರ್‌ನನ್ನು ಬಂಧಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]