ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 MARCH 2024
BYKODU : ಕಾಡಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿರುವ ಮೃತದೇಹ ಸಂಪೂರ್ಣ ಕೊಳೆತಿದೆ. ಗ್ರಾಮಸ್ಥರು ಕಟ್ಟಿಗೆಗಾಗಿ ಕಾಡಿಗೆ ತೆರಳಿದ್ದಾಗ ಮೃತದೇಹ ಪತ್ತೆಯಾಗಿದೆ.
ಸಾಗರ ತಾಲೂಕು ಬ್ಯಾಕೋಡು ಸಮೀಪದ ಆವಿಗೆಯ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಗ್ರಾಮಸ್ಥರ ದೂರಿನ ಮೇರೆಗೆ ಕಾರ್ಗಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಮತ್ತು ಡಿಎನ್ಎ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಲಾಗಿದೆ.
ಪತ್ನಿ ಕೊಂದವನ ಮೃತದೇಹ ಶಂಕೆ
2024ರ ಜ.20ರಂದು ಆವಿಗೆ ಗ್ರಾಮದ ನೀಲಾವತಿ ಎಂಬುವವರನ್ನು ಆಕೆಯ ಪತಿ ಲೋಕೇಶ್ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದ. ಆತ ಪೊಲೀಸರ ಕೈಗೆ ಸಿಗದೆ ಕಣ್ಮರೆಯಾಗಿದ್ದ. ಆವಿಗೆಯ ಕಾಡಿನಲ್ಲಿ ಸಿಕ್ಕ ಶವ ಲೋಕೇಶ್ನದ್ದೆ ಇರಬಹುದು ಎಂದು ಗ್ರಾಮಸ್ಥರು ಮತ್ತು ಆತನ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಮೇಲೆ ದಾಳಿ, ಗ್ರಾಹಕ, ಯುವತಿ ರಕ್ಷಣೆ, ಮಹಿಳೆ ವಿರುದ್ಧ ಕೇಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422