ವಿದ್ಯುತ್‌ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?‌

Published On : ಮಾರ್ಚ್ 20, 2026

Published By : ನಿತಿನ್‌ ಆರ್‌.ಕೈದೊಟ್ಲು 

ಕಾರ್ಗಲ್: ಜಮೀನಿನ ಬೇಲಿಗೆ (electric fence) ಅಕ್ರಮವಾಗಿ ವಿದ್ಯುತ್ ಹರಿಸಿದ ಪರಿಣಾಮ ದನ ಮೃತಪಟ್ಟಿದೆ. ಸಾಗರ ತಾಲೂಕು ಕಳಸವಳ್ಳಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ – ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಮೇಯಲು ಬಿಟ್ಟಿದ್ದ ಪ್ರವೀಣ ಅವರ ಆಕಳು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹಾಗಾಗಿ ಹುಡುಕಾಟ ನಡೆಸಿದ್ದರು. ಮರುದಿನ ಬೆಳಗ್ಗೆ ಊರಿನ ಗೋಶಾಲೆಯ ಬಳಿ ಆಕಳು ಮೃತಪಟ್ಟಿರುವುದು ಕಂಡುಬಂದಿದೆ. ಮೃತ ದನವನ್ನು ಸುಮಾರು 200 ಮೀಟರ್ ದೂರ ಎಳೆದುಕೊಂಡು ಬಂದಿರುವ ಗುರುತು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ.

ಜಮೀನಿನ ಬೇಲಿಗೆ ವಿದ್ಯುತ್ ಲೈನ್‌ನಿಂದ ಅಕ್ರಮವಾಗಿ ವಿದ್ಯುತ್ ಹರಿಸಿದ್ದು, ಇದನ್ನು ಸ್ಪರ್ಶಿಸಿದ ಆಕಳು ಸ್ಥಳದಲ್ಲೇ ಮೃತಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು ₹25,000 ನಷ್ಟವಾಗಿದೆ ಎಂದು ಪ್ರವೀಣ್‌ ಅವರು ಆರೋಪಿಸಿದ್ದಾರೆ. ಜಮೀನನ ಮಾಲೀಕನ ವಿರುದ್ಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 20, 2026

Leave a Comment