ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 AUGUST 2023
SAGARA : ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಜಿಂಕೆ (DEER) ಚಿಕಿತ್ಸೆ ವೇಳೆ ಮೃತಪಟ್ಟಿದೆ. ಸಾಗರ ತಾಲೂಕು ಮಾನ್ವೆ ಕಾನುಗೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಆಹಾರ ಅರಸಿಕೊಂಡು ಎರಡು ವರ್ಷದ ಜಿಂಕೆಯೊಂದು (DEER) ಊರಿಗೆ ಬಂದಾಗ ನಾಯಿಗಳು ದಾಳಿ ಮಾಡಿದ್ದವು. ಗ್ರಾಮಸ್ಥರನ್ನು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿದ್ದರು. ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಜಿಂಕೆಯನ್ನು ಸಾಗರದ ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗೆ ದಾಖಲಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೋನಿಗೆ ಬಿತ್ತು ಚಿರತೆ, ಸೆರೆ ಹಿಡಿಯಲು ಮೈಸೂರಿನಿಂದ ಬಂದಿತ್ತು ಟಾಸ್ಕ್ ಫೋರ್ಸ್
ಚಿಕಿತ್ಸೆ ವೇಳೆ ಜಿಂಕೆಗೆ ಜ್ವರ ಕಾಣಿಸಿಕೊಂಡಿದ್ದು ಹೃದಯಾಘಾತ ಸಂಭವಿಸಿದೆ. ಉಪ ವಲಯ ಅರಣ್ಯ ಅಧಿಕಾರಿ ಅಣ್ಣಪ್ಪ ನೇತೃತ್ವದಲ್ಲಿ ಬೀಟ್ ಫಾರೆಸ್ಟರ್ ಯುವರಾಜ್, ಪಶು ವೈದ್ಯಾಧಿಕಾರಿ ಡಾ. ಅರವಿಂದ್, ಗ್ರಾಮಸ್ಥರು ಜಿಂಕೆಯ ರಕ್ಷಣೆಯ ಪ್ರಯತ್ನಿಸಿದ್ದರು.