BREAKING NEWS | ಸಾಗರ – ಶಿವಮೊಗ್ಗ ಮಧ್ಯೆ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 7 SEPTEMBER 2023

SAGARA : ಹಳಿ ಮೇಲೆ ವಿದ್ಯುತ್‌ ಕಂಬಿ ತುಂಡಾಗಿ ಬಿದ್ದಿದ್ದರಿಂದ ಕೆಲಕಾಲ ರೈಲು (Trains) ಸಂಚಾರ ವ್ಯತ್ಯಯವಾಗಿತ್ತು. ಕೂಡಲೆ ರೈಲ್ವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಾಂತ್ರಿಕ ಸಮಸ್ಯೆ ಪರಿಹರಿಸಿದ್ದಾರೆ.

ಆನಂದಪುರ ಸಮೀಪ ರೈಲ್ವೆ ಹಳಿ ಮೇಲೆ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿತ್ತು. ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು (Inter City) ಸಿಬ್ಬಂದಿ ಇದನ್ನು ಗಮನಿಸಿ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ – KSRTC ಬಸ್ಸಿನಲ್ಲಿ ಟಿಕೆಟ್‌ ಮಾಡಿಸಲು ವ್ಯಾನಿಟಿ ಬ್ಯಾಗ್‌ ತೆಗೆದಾಗ ಮಹಿಳೆ, ಪತಿಗೆ ಕಾದಿತ್ತು ಶಾಕ್‌

ಎರಡೂವರೆ ಗಂಟೆ ತಡ

ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಬೆಂಗಳೂರು ಇಂಟರ್‌ಸಿಟಿ (ರೈಲು ಸಂಖ್ಯೆ 20652) ಬೆಳಗ್ಗೆ 6.05ಕ್ಕೆ ಆನಂದಪುರಕ್ಕೆ ತಲುಪಿದ್ದು, ಅಲ್ಲಿಯೇ ನಿಂತಿತ್ತು. ಹಳಿ ಮೇಲೆ ಬಿದ್ದಿದ ವಿದ್ಯುತ್‌ ತಂತಿ ತೆರವುಗೊಳಿಸಿ ರಿಪೇರಿ ಕಾರ್ಯ ನಡೆಸಲಾಯಿತು. ಎರಡೂವರೆಗೆ ಗಂಟೆ ಬಳಿಕ 8.39ಕ್ಕೆ ರೈಲು (Trains) ಸಂಚಾರ ಆರಂಭಿಸಿದೆ. 7 ಗಂಟೆಗೆ ಶಿವಮೊಗ್ಗ ನಿಲ್ದಾಣ ತಲುಪಬೇಕಿದ್ದ ರೈಲು 10 ಗಂಟೆ ಹೊತ್ತಿಗೆ ತಲುಪಿದೆ.

ತಾಳಗುಪ್ಪದವರೆಗೆ ರೈಲ್ವೆ ಲೇನ್‌ ವಿದ್ಯುದೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಇದರ ವಯರ್‌ ತುಂಡಾಗಿ ರೈಲ್ವೆ ಲೇನ್‌ ಮೇಲೆ ಬಿದ್ದಿತ್ತು ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆ ಸಿಬ್ಬಂದಿ ರಿಪೇರಿ ಕಾರ್ಯ ಕೈಗೊಂಡು ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Leave a Comment